ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಪುರಸಭೆ ವ್ಯಾಪ್ತಿಯಲ್ಲಿ ಇಂದು ಕೋವಿಡ್ 19 ಮಹಾಮಾರಿಗೆ ಒಬ್ಬ ಬಲಿಯಾಗಿದ್ದಾನೆ. ಕುಂದಾಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಕಲ ಸೌಕಾರ್ಯವಿದ್ದಾಗಲೂ,ಸಾವು ತುಂಬಾ ನೋವು ನೀಡಿದೆ. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೇ ಸಾವಾಗಿದೆ ಎನ್ನುವುದು ಮಾಮೂಲಿ ಎಂದು ಪುರಸಭಾ ಸದಸ್ಯ ಚಂದ್ರಶೇಖರ ಖಾರ್ವಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತದನಂತರ ಸರಕಾರಿ ನಿಯಮದ ಪ್ರಕಾರನೇ ಅಂತ್ಯಕ್ರಿಯೆಗಳು ಮುಗಿಸಬೇಕು ಆದರೆ ಬಡ ಕುಟುಂಬ ಅಂತ್ಯಕ್ರಿಯೆಯನ್ನು ಮುಗಿಸಲು ಏನು ಮಾಡಬೇಕು?ಈಗಾಗಲೇ ಲಾಕ್ ಡೌನ್ ನಿಂದ ಕೆಲಸವಿಲ್ಲದೇ ಸೋತ ಕೈಗಳಿಗೆ ಅಂತ್ಯಕ್ರಿಯೆ ಮುಗಿಸುವುದು ಸವಾಲಾಗಿದೆ.
ಪ್ರಕ್ರಿಯೆಗಳು ಮುಗಿದ ಮೇಲೆ ಶ್ಮಶಾನಕ್ಕೆ ಶವಕೊಂಡು ಹೋಗುವುದು ಕೂಡ ಕಠಿಣವಾಯ್ತು. ಅಂಬುಲೆನ್ಸ್ ಕಾದಿದ್ದೆ ಬಂತು ಇಡೀ ಜಿಲ್ಲೆಗೆ ಒಂದೇ ಅಂಬುಲೆನ್ಸ್ ಮಾತ್ರ ಕಾರ್ಯನಿರ್ವಹಿಸುತ್ತಿದೆ ಎಂಬ ಮಾಹಿತಿ ದೊರಕಿದ್ದು ಅದು ಕೂಡ ಕರೆ ಮಾಡಿದ್ರೇ ಕಾರ್ಕಳದಲ್ಲಿ ಸೇವೆಯಲ್ಲಿರುತ್ತದೆ ಎಂದು ತಿಳಿದು ಬಂತು. ಹಾಗಾದ್ರೇ ಬಡ ಜನತೆ ಹೇಗೆ ನಿಭಾಯಿಸುವುದು.?
ಸ್ಥಳೀಯ ಸಂಸ್ಥೆಯ(TMC kundapur) ಆಡಳಿತಾಧಿಕಾರಿಯವರನ್ನು ಸಂಪರ್ಕಿಸಿದಾಗ,ಕೂಡಲೇ ಅಂಬುಲೆನ್ಸ್ ವ್ಯವಸ್ಥೆ ಮಾಡಿ ಹಾಗೂ ಶವ ಸಂಸ್ಕಾರದ ವೆಚ್ಚವನ್ನು ಭರಿಸುವ ಕೆಲಸ ಮಾಡಿರುತ್ತಾರೆ. ಅವರಿಗೆ ಕೃತಜ್ಞತೆಗಳು ಎಂದಿದ್ದಾರೆ.
ಕುಂದಾಪುರದ ಸುತ್ತಮುತ್ತಲಿನ ಗ್ರಾಮದ ಕೋವಿಡ್ ಸೋಂಕಿತರು ದಾಖಲಾಗುವುದು ಕುಂದಾಪುರ ಸಾರ್ವಜನಿಕ ಆಸ್ಪತ್ರೆಗೆ. ಆದ್ದರಿಂದ ಕೊನೆ ಪಕ್ಷ ಒಂದು ಅಂಬುಲೆನ್ಸ್ ನ್ನು ಕುಂದಾಪುರಕ್ಕೆ ಮಿಸಲಾಗಿಡಿ ಎಂಬುದು ಕೋರಿಕೆ ಅನಿವಾರ್ಯತೆ ಕೂಡ. ಹಾಗೂ ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಸ್ಮಶಾನದಲ್ಲಿ ದಿನಕ್ಕೆ 4ರಿಂದ 5 ಶವವನ್ನು ಧಪನ್ ಮಾಡಬಹುದಾದರಿಂದ ಅಯಾಯ ಗ್ರಾಮ ಪಂಚಾಯತಿನ ಸ್ಮಶಾನವನ್ನು ಮುಂಜಾಗೃತೆಗಾಗಿ ಸಜ್ಜು ಮಾಡಿದರೇ ಒಳಿತು ಎಂಬುದು ನನ್ನ ಅಭಿಪ್ರಾಯ. ಅದಕ್ಕಾಗಿ ಅಯಾಯ ಗ್ರಾಮ ಪಂಚಾಯತಿನ ಕಾರ್ಯದರ್ಶಿಗಳಿಗೆ ಹಾಗೂ PDO ಗಳಿಗೆ ನಿರ್ದೇಶನ ನೀಡುವುದು ಅತೀ ಜರೂರತೆ ಇದೆ. ಇಂದು ನಾನು ಸ್ವತಹ ಕಂಡುಕೊಂಡದ್ದು. ತಾವು ಕೆಲವೊಂದು ಲೋಪಗಳನ್ನು ಸರಪಡಿಸುವಿರಿ ಎಂಬ ಭರವಸೆ ಇದೆ ಎಂದು ಅವರು ಮನವಿ ಮಾಡಿದ್ದಾರೆ.