ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ದೇಶಾದ್ಯಂತ ಕೋವಿಡ್ ಎರಡನೇ ಅಲೆಯಿಂದ ಅನಾಹುತಗಳು ಹೆಚ್ಚಾಗುತ್ತಿವೆ. ಯುವಕರು ಕೂಡಾ ಸೋಂಕಿಗೆ ತುತ್ತಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಗಾಬರಿ ಪಡುವುದಕ್ಕಿಂತ ಎಚ್ಚರಿಕೆ ವಹಿಸುವುದು ಅಗತ್ಯ. ಅದಕ್ಕಾಗಿಯೇ ಸರ್ಕಾರ ಎರಡನೇ ಹಂತದ ಲಾಕ್ ಡೌನ್ ಘೋಷಿಸಿದೆ. ಇದು ಶಿಕ್ಷೆ ಅಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
ಜನರ ಜೀವ ಉಳಿಸಲು ಪ್ರಧಾನಿಯವರು, ಮುಖ್ಯಮಂತ್ರಿಯವರು, ಶಾಸಕರು ಶ್ರಮ ಪಡುತ್ತಿದ್ದಾರೆ. ಕೋವಿಡ್ ವಾರಿಯರ್ಸ್ ಜೀವದ ಹಂಗು ತೊರೆದು ಶ್ರಮ ಪಡುತ್ತಿದ್ದಾರೆ. ಇದನ್ನು ಅರ್ಥ ಮಾಡಿಕೊಂಡು, ಅಗತ್ಯವಿದ್ದಲ್ಲಿ ಮಾತ್ರ ಮನೆಯ ಹೊಸಿಲು ದಾಟಿ ಸಹಕರಿಸಿ ಎಂದು ಮನವಿ ಮಾಡಿದ್ದಾರೆ.
ಕೋವಿಡ್ ಕೇಸಸ್ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಎಸಿ, ತಾಲೂಕು ಮಟ್ಟದ ಅಧಿಕಾರಿಗಳು,ಶಾಸಕರ ನೇತೃತ್ವದಲ್ಲಿ ಮೂರು ಬಾರಿ ಸಭೆ ನಡೆಸಿದ್ದೇವೆ. ಮತ್ತೆ ಸಭೆ ನಡೆಸಿ ಲಾಕ್ ಡೌನ್ ಯಾವ ರೀತಿ ಬಿಗಿ ಮಾಡಬೇಕು, ಅವಶ್ಯಕ ವಸ್ತುಗಳನ್ನು ಮನೆ ಮನೆಗೆ ಹೇಗೆ ಜನಸಂದಣಿ ಆಗದಂತೆ ತಲುಪಿಸಬೇಕು. ಆಸ್ಪತ್ರೆ ವ್ಯವಸ್ಥೆ ದೃಷ್ಟಿಯಿಂದ ವಿಶೇಷವಾಗಿ ಸೋಂಕು ಹೆಚ್ಚಾಗುತ್ತಿರುವ ಮಲೆನಾಡು, ಸಿದ್ಧಾಪುರಗಳಲ್ಲಿ ಯಾವ ರೀತಿ ಗಮನ ಕೊಡಬೇಕು ಎಂಬ ಬಗ್ಗೆ ಚರ್ಚಿಸಿದ್ದೇವೆ. ಎರಡು ವಾರದಲ್ಲಿ ದೇಶಾದ್ಯಂತ ಸೋಂಕು ನಿಯಂತ್ರಿಸುವ ವಿಶ್ವಾಸ ಇದೆ ಎಂದಿದ್ದಾರೆ.
ಸೋಂಕು ಹೆಚ್ಚಾಗದಂತೆ ಕ್ರಮ
ರೇಷನ್ ಕಾರ್ಡ್, ಕಿಟ್ ಮನೆ ಮನೆಗೆ ತಲುಪಿಸುವ ಕಾರ್ಯ ಮಾಡಲಾಗುವುದು. ರೇಷನ್ ನೀಡುವ ವೇಳೆ ಜನಸಂದಣಿ ಆಗದಂತೆ ಒಂದೊಂದು ಊರಿಗೆ ಒಮ್ಮೊಮ್ಮೆ ಮಾಡುವ ಕಾರ್ಯ ಮಾಡಲಾಗುವುದು.
ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗುವುದು
ಖಾಸಗಿ ಆಂಬುಲೆನ್ಸ್ ನಿಮ್ಮ ಬೆಲೆಗೆ ಬಂದಿಲ್ಲವಾದ್ರೆ ಟೇಕ್ ಓವರ್ ಮಾಡಲು ಕಾನೂನಿನಲ್ಲ ಅವಕಾಶ ಇದೆ. ಎಷ್ಟು ಬೇಕೋ ಅಷ್ಟು ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗುತ್ತದೆ.
ಆಶಾ ಕಾರ್ಯಕರ್ತೆಯರಿಗೆ, ಹೆಲ್ತ್ ಸೆಕ್ಟರ್ ಗಳಲ್ಲಿ ಕೆಲಸ ಮಾಡುವವರಿಗೆ ಕೋವಿಡ್ ವಾರಿಯರ್ಸ್ ಪರಿಗಣಿಸಲಾಗಿದ್ದು, ಅವರಿಗೆ ಮೊದಲು ಲಸಿಕೆ ನೀಡಲಾಗುತ್ತದೆ ಎಂದರು.
ರೈತರಿಗೆ ತಮಗೆ ಬೇಕಾದುದ ಕೊಳ್ಳಲು ಅವಕಾಶವಿದೆ. ಒಂದು ವಾರ ತೋಟಕ್ಕೆ ಬೇಕಾದುದ ಬಳಸದೇ ಹೋದರೂ ಏನಾಗುವುದಿಲ್ಲ ಎಂದಾದಲ್ಲಿ ಮನೆಯಲ್ಲಿಯೇ ಇರಲಿ. ಆದರೆ,
ಆತನ ಮೊದಲ ಆದ್ಯತೆ ಜೀವ, ನಂತರ ತೋಟ. ಮೊದಲ ಆದ್ಯತೆ ಯಾವುದೆಂದು ಆತನೇ ತೀರ್ಮಾನಿಸಬೇಕು. ಆತನಿಗೆ ತೊಂದರೆಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳುವುದು ಎಂದರು.