ಉಡುಪಿ : ಕೊರೋನಾ ಚೈನ್ ಬ್ರೇಕ್ ಮಾಡುವ ಸಲುವಾಗಿ ಕೊರೋನಾ ಘೋಷಿಸಿರುವ ಲಾಕ್ ಡೌನ್ ಎರಡನೇ ದಿನಕ್ಕೆ ಕಾಲಿಟ್ಟಿದೆ. ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದೆ. ಹಾಗಾಗಿ ಉಡುಪಿಯಲ್ಲಿ ಖರೀದಿ ಭರಾಟೆ ಜೋರಾಗಿಯೇ ಇದೆ. ಸಾಮಾಜಿಕ ಅಂತರ ಮರೆತು ಮಂದಿ ಖರೀದಿಗೆ ಮುಗಿ ಬಿದ್ದಿದ್ದಾರೆ. ಅಂಬಾಗಿಲು, ಸಂತೆಕಟ್ಟೆ ಸೇರಿದಂತೆ ಹಲೆವೆಡೆ ಖರೀದಿಗೆ ಜನ ಸೇರಿದ್ದಾರೆ.