`ಲಕ್ಷ್ಮೀ ಬಾರಮ್ಮ’ ಖ್ಯಾತಿಯ ಚಂದನ್ ಗೌಡ ಹಾಗೂ ಕವಿತಾ ಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಾಂಗಲ್ಯಧಾರಣೆ ವೇಳೆ ಮಾಸ್ಕ್ ಧರಿಸಿದ್ದು ವಿಶೇಷವಾಗಿತ್ತು. ಚಂದು ಹಾಗೂ ಚಿನ್ನು ಪಾತ್ರದಲ್ಲಿ ಲಕ್ಷ್ಮೀ ಬಾರಮ್ಮ ಧಾರವಾಹಿಯಲ್ಲಿ ಇವರಿಬ್ಬರ ಪಾತ್ರ ಜನಮನ್ನಣೆ ಪಡೆದಿತ್ತು. ಇದೀಗ ಈ ಜೋಡಿ ನಿಜಜೀವನದಲ್ಲೂ ಒಂದಾಗಿದ್ದಾರೆ.
ಎಪ್ರಿಲ್ 1 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದ ಚಂದನ್ ಹಾಗೂ ಕವಿತಾ ಇಂದು (ಮೇ 14) ಸರಳವಾಗಿ ಹಸೆಮಣೆ ಏರಿದ್ದಾರೆ. ಆಪ್ತರ ಸಮ್ಮುಖದಲ್ಲಿ ಬೆಂಗಳೂರಿನ ಸಹಕಾರ ನಗರದಲ್ಲಿನ ಚಂದನ್ ಮನೆಯಲ್ಲಿ ವಿವಾಹ ನೆರವೇರಿದೆ.
ರಾಧಾ ಕಲ್ಯಾಣ, ಲಕ್ಷ್ಮೀಬಾರಮ್ಮ ಧಾರಾವಾಹಿಗಳಲ್ಲಿ ನಟಿಸಿರುವ ಚಂದನ್, ಲವ್ ಯೂ ಆಲಿಯಾ, ಪ್ರೇಮ ಬರಹ ಚಿತ್ರದಲ್ಲಿ ನಟಿಸಿದ್ದಾರೆ. ಲಕ್ಷ್ಮೀಬಾರಮ್ಮ ಧಾರಾವಾಹಿ ನಂತರ ಶ್ರೀನಿವಾಸ ಕಲ್ಯಾಣ, ಫಸ್ಟ್ ಲವ್, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಬೀರಬಲ್ ಚಿತ್ರಗಳಲ್ಲಿ ನಟಿಸಿದ್ದಾರೆ. ಹುಟ್ಟು ಹಬ್ಬದ ಶುಭಾಶಯಗಳು, ಗೋವಿಂದ ಗೋವಿಂದ ಸಿನಿಮಾಗಳು ತೆರೆಗೆ ಬರಲು ಸಿದ್ಧವಾಗಿವೆ.
Advertisement. Scroll to continue reading.
In this article:chandan gowda, Diksoochi news, diksoochi Tv, diksoochi udupi, kavitha gowda, lakshmi baramma
Click to comment