Connect with us

Hi, what are you looking for?

Diksoochi News

Uncategorized

ಕುಂದಾಪುರ: ಕೋವಿಡ್ ಸೋಂಕಿತರು ಧೈರ್ಯದಿಂದಿರಿ; ಕೋವಿಡ್ ಗೆದ್ದ ಕುಟುಂಬದ ಮನವಿ

0

ವರದಿ : ದಿನೇಶ್ ರಾಯಪ್ಪನಮಠ

ಕುಂದಾಪುರ : ಕೋವಿಡ್ ಆತಂಕ ಎಲ್ಲೆಡೆ ಮನೆ ಮಾಡಿದೆ. ಕೊರೋನಾ ಸೋಂಕಿಗೊಳಪಟ್ಟವರಲ್ಲಿ ಆತಂಕ ಸಹಜ. ಹಾಗಾಗಿ ಭಯ ಬೇಡ, ಧೈರ್ಯದಿಂದ ಸೋಂಕನ್ನು ಗೆಲ್ಲಿ ಎಂದು ಕುಂದಾಪುರದಲ್ಲೊಂದು ಕುಟುಂಬ ಮನವಿ ಮಾಡಿದೆ. ತಾಲೂಕಿನ ಹೊಂಬಾಡಿ ಮಂಡಾಡಿ ಗ್ರಾಮದ ಕುಟುಂಬವೊಂದರ 19 ಜನ ಸದಸ್ಯರಿಗೆ ಕೋವಿಡ್ ಲಕ್ಷಣ ಕಂಡು ಬಂದಿತ್ತು. ಪರೀಕ್ಷೆಗೊಳಪಟ್ಟಾಗ ಕೊರೋನಾ ಸೋಂಕು ದೃಢಪಟ್ಟಿತ್ತು.
ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 19 ಜನರೂ ಗುಣಮುಖರಾಗಿದ್ದಾರೆ. ಇದೀಗ ಕೋವಿಡ್ ಸೋಂಕಿತರಿಗೆ ಧೈರ್ಯ ತುಂಬುವ ಕಾರ್ಯ ಮಾಡುತ್ತಿದ್ದಾರೆ. ಧೈರ್ಯದಿಂದ ಇದ್ದು ಕೋವಿಡ್ ಗೆಲ್ಲಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!