ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಇನೋವಾ ಕಾರಿನ ಟಯರು ಬ್ಲಾಷ್ಟಾಗಿ ಕಾರ್ ಪಲ್ಟಿ ಹೊಡೆದು ಮಹಿಳೆಯೊಂದು ಸಾವಿಗೀಡಾದ ಘಟನೆ ರಾ.ಹೆ. 66ರಲ್ಲಿ ಕುಂದಾಪುರದ ಪ್ಲೈ ಓವರ್ ನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಸಮೀಪ ಭಾನುವಾರ ಬೆಳಿಗ್ಗೆ ನಡೆದಿದೆ. ವಸಂತಿ (35) ಮೃತ ದುರ್ದೈವಿ. ಘಟನೆ ನಡೆಯುತ್ತಿದ್ದಂತೆ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಕಾರಿನಲ್ಲಿ 5 ಜನರಿದ್ದು ಸಾಸ್ತಾನದಿಂದ ಹಟ್ಟಿಕುದ್ರುಗೆ ಹೋಗುತ್ತಿರುವಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಕಾರಿನಲ್ಲಿದ್ದವರೆಲ್ಲರು ಮೂಲತಃ ಬೈಂದೂರಿನ ಬಂಟ್ವಾಡಿಯವರೆಂದು ತಿಳಿದು ಬಂದಿದೆ.
ಇನ್ನು ಉಳಿದ ನಾಲ್ವರಿಗೆ ಅಲ್ಪ ಸ್ವಲ್ಪ ಗಾಯಗಳಾಗಿದ್ದು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಂದಾಪುರ ಸಂಚಾರಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
Advertisement. Scroll to continue reading.