Connect with us

Hi, what are you looking for?

Diksoochi News

Uncategorized

ಕುಂದಾಪುರ : ರೋಜರಿ ಕ್ರೆಡಿಟ್ ಕೋ-ಆಪರೇಟಿವ್‌ ಸೊಸೈಟಿಯ ಕಾರ್ಯನಿರ್ವಹಣಾಧಿಕಾರಿ ಪಾಸ್ಕಲ್ ಡಿಸೋಜಾ ನಿಧನ

0

ವರದಿ : ದಿನೇಶ್ ರಾಯಪ್ಪನಮಠ

ಕುಂದಾಪುರ : ರೋಜರಿ ಕ್ರೆಡಿಟ್ ಕೋ ಆಪರೇಟಿವ್‌ ಸೊಸೈಟಿಯ ಕಾರ್ಯನಿರ್ವಹಣಾಧಿಕಾರಿ ಪಾಸ್ಕಲ್ ಡಿಸೋಜಾ ಅಲ್ಪಕಾಲದ ಅಸೌಖ್ಯದಿಂದಾಗಿ ಭಾನುವಾರ ನಿಧನರಾಗಿದ್ದಾರೆ.

ಸಂಗೀತಗಾರನಾಗಿ ಗಮನ ಸೆಳೆದಿದ್ದ ಗಾಯಕ

Advertisement. Scroll to continue reading.

ರೋಜರಿ ಕ್ರೆಡಿಟ್ ಕೋ ಆಪರೇಟಿವ್‌ ಸೊಸೈಟಿಯ ಪ್ರಾರಂಭದಿಂದಲೂ ಸಂಸ್ಥೆಯಲ್ಲಿ ಸೇವೆಸಲ್ಲಿಸುತ್ತಿದ್ದರು.

ಅವರು ಒಳ್ಳೆಯ ಸಂಗೀತಗಾರರಾಗಿದ್ದರು. ಕುಂದಾಪುರ ಇಗರ್ಜಿಯ ಗಾಯನ ತಂಡದ ಪ್ರಮುಖ ಸೇವಾರ್ಥಿಯಾಗಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಹಲವು ರಸಮಂಜರಿ ಕಾರ್ಯಕ್ರಮಗಳಲ್ಲಿ ಹಾಡುಗಳನ್ನು ಹಾಡಿರುವ ಅವರು ಹಾಡಿರುವ ಹಲವು ಸಂಗೀತ ಸಿಡಿಗಳು ಮಾರುಕಟ್ಟೆಗೆ ಬಂದಿದೆ.

ಗಣ್ಯರಿಂದ ಕಂಬನಿ

ಭಕ್ತಿ ಗಾಯನಗಳ ಮೂಲಕ ಕ್ರೈಸ್ತ್‌ ವಲಯದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಅವರ ನಿಧನಕ್ಕೆ ಕುಂದಾಪುರ ವಲಯ ಧರ್ಮಗುರುಗಳಾದ ಸ್ಟಾನಿ ತಾವ್ರೋ, ಸಹಾಯಕ ಧರ್ಮಗುರು ವಿಜಯ್‌ ಡಿಸೋಜಾ, ಚರ್ಚ್ ಸಂಗಿತ ತಂಡದ ಅಧ್ಯಕ್ಷೆ ವಿನಯಾ ಡಿಕೋಸ್ತಾ, ರೋಜರಿ ಕ್ರಡಿಟ್ ಕೋ ಆಪರೇಟಿವ್‌ ಸೊಸೈಟಿಯ ಅಧ್ಯಕ್ಷ ಜೋನ್ಸನ್ ಆಲ್ಮೇಡಾ, ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ , ಕೆಥೋಲಿಕ್ ಸಭಾ ಅಧ್ಯಕ್ಷ ಬರ್ನಾಡ್ ಡಿಕೋಸ್ತಾ ಕಂಬನಿ ಮಿಡಿದಿದ್ದಾರೆ. ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!