ವರದಿ: ಶಫೀ ಉಚ್ಚಿಲ
ಕಾಪು : ಕರಾವಳಿಯಲ್ಲಿ ಪ್ರಕೃತಿಕ ವಿಕೋಪದಿಂದ ಸಂಪೂರ್ಣ ಹಾನಿಗೊಳಗಾದ ಮನೆಗಳಿಗೆ ರೂ. ಐದು ಲಕ್ಷ ಪರಿಹಾರ ಮೊತ್ತವನ್ನು ನೀಡಲಾಗುವುದು ಎಂದು
ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಮಂಗಳವಾರ ಕಾಪುವಿನ ಕೈಪುಂಜಾಲು ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿದ ಅವರು,ಕಡಲ್ಕೊರೆತವನ್ನು ವೀಕ್ಷಿಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಎರಡು ದಿನಗಳಿಂದ ಕರಾವಳಿಯ ವಿವಿದೆಡೆ ಮಳೆ ಹಾನಿ,ಚಂಡ ಮಾರುತ ಹಾನಿ ಮತ್ತು ಕಡಲ್ಕೊರೆತ ಭೇಟಿ ನೀಡಿದ್ದು,ಸಮಗ್ರವಾಗಿ ವರದಿ ಸಿದ್ದಪಡಿಸಿ ಮುಖ್ಯಮಂತ್ರಿಗಳಿಗೆ ನೀಡಲಾಗುವುದು. ಪ್ಯಾಕೇಜ್ ಘೋಷಣೆ ಬಗ್ಗೆ ನಿರ್ಧರಿಸಲಾಗುವುದು ಎಂದು ಹೇಳಿದರು.
ತಹಶಿಲ್ದಾರ್ ಪ್ರತಿಭಾ ಆರ್,ಕಾಪು ಶಾಸಕ ಲಾಲಾಜಿ ಆರ್ ಮೆಂಡನ್,ಪುರಸಭೆ ಅನಿಲ್ ಕುಮಾರ್,ಮುಖ್ಯಾಧಿಕಾರಿ ವೆಂಕಟೇಶ ನಾವಡ,ಪುರಸಭೆ ಸದಸ್ಯೆ ರಮಾ ವೈ ಶೆಟ್ಟಿ, ಕಂದಾಯ ನಿರೀಕ್ಷಕ ಸುದೀರ್ ಕುಮಾರ್ ಶೆಟ್ಟಿ, ಗ್ರಾಮ ಕರಣಿಕ ಗಣೇಶ್ ಮೇಸ್ತ,ನಗರದ ಯೋಜನಾ ಪ್ರಾಧಿಕಾರದ ಸದಸ್ಯ ರಮೇಶ್ ಪೂಜಾರಿ,ಕೈಪುಂಜಾಲು ಮೊಗವೀರ ಮಹಾ ಸಭಾ ಅಧ್ಯಕ್ಷ ಸತೀಶ್ ಕುಂದರ್,ಸ್ಥಳೀಯರಾದ ರಮೇಶ್,ಚಂದ್ರಶೇಖರ್,ಪೂರ್ಣಿಮಾ, ಗೀತ ಬ್ರಹಾಸ್ಪತಿ ಮೊದಲಾದವರು ಉಪಸ್ಥಿತರಿದ್ದರು.