ನವದೆಹಲಿ : ಹೆಚ್ಚುತ್ತಿರುವ ಕೊರೋನಾ ಸೋಂಕಿನ ವಿರುದ್ಧ ಹೋರಾಡುವಲ್ಲಿ ತ್ವರಿತಗತಿಯಲ್ಲಿ ಕೊರೋನಾ ಪರೀಕ್ಷೆ, ಸ್ಥಳಿಯ ಕಂಟೇನ್ಮೆಂಟ್ ಝೋನ್ ಗಳ ನಿರ್ಮಾಣ ಹಾಗೂ ಕೊರೋನಾ ಸೋಂಕಿನ ಕುರಿತಾದ ನಿಖರ ಮಾಹಿತಿ ಜನರಿಗೆ ತಲುಪಿಸುವುದು ಶಸ್ತ್ರಾಸ್ತ್ರಗಳಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕೊರೋನಾ ನಿರ್ವಹಣೆ ಕುರಿತು 10 ರಾಜ್ಯಗಳ ಮುಖ್ಯ ಮಂತ್ರಿಗಳು ಹಾಗೂ ಜಿಲ್ಲಾಧಿಕಾರಿಗಳ ಜೊತೆ ಅವರು ಇಂದು ವಿಡಿಯೋ ಸಂವಾದ ನಡೆಸಿದರು.
ಕೊರೋನಾ ಪರೀಕ್ಷೆ ತ್ವರಿತಗೊಳಿಸಿ
ಪ್ರತಿ ಜಿಲೆಯೂ ತನ್ನದೇ ಆದ ಕೊರೋನಾ ನಿರ್ವಹಣಾ ಸವಾಲುಗಳನ್ನು ಹೊಂದಿದ್ದು, ಈ ಸವಾಲುಗಳನ್ನು ಎದುರಿಸಿ ಸೋಂಕನ್ನು ಸೋಲಿಸುವ ಗುರಿ ಹೊಂದಬೇಕು. ಈ ಹೋರಾಟದಲ್ಲಿ ಪ್ರತೀ ಅಧಿಕಾರಿಯ ಪಾತ್ರವೂ ಮುಖ್ಯವಾಗಿದ್ದು, ಕೊರೋನಾ ಪರೀಕ್ಷೆ ತ್ವರಿತಗೊಳಿಸಬೇಕು. ಕೊರೋನಾ ಸೋಂಕಿನ ಕುರಿತಾದ ನಿಖರ ಮಾಹಿತಿ ಜನರಿಗೆ ತಲುಪಿಸುವುದು ಶಸ್ತ್ರಾಸ್ತ್ರಗಳಾಗಬೇಕು. ಜೊತೆಗೆ ವೈದ್ಯಕೀಯ ಉತ್ಪನ್ನಗಳ ಅಕ್ರಮ ಮಾರಾಟ ತಡೆಯುವುದೂ ಸದ್ಯದ ಅವಶ್ಯಕತೆಯಾಗಿದೆ ಎಂದರು.
ಕ್ಷೇತ್ರ ಮಟ್ಟದ ಅಧಿಕಾರಿಗಳ ಶ್ಲಾಘನೆ
ಜನರಿಗೆ ತೊಂದರೆಯಾಗದಂತೆ ಕೊರೋನಾ ನಿರ್ವಹಣೆಯನ್ನು ಸರ್ಕಾರ ಮಾಡಬೇಕಿದೆ. ಕೊರೋನಾ ನಿರ್ವಹಣೆಯಲ್ಲಿ ಕ್ಷೇರ್ತರ ಮಟ್ದ ಅಧಿಕಾರಿಗಳು ಬಹುಮುಖ್ಯ ಪಾತ್ರ ವಹಿಸುತ್ತಾರೆ.ಹಲವರು ಅತ್ಯುನ್ನತ ಕಾರ್ಯಗಳನ್ನು ನಿರ್ವಹಿಸಿ ಸೂಕ್ತ ಪರಿಹಾರಗಳನ್ನು ಸೂಚಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ. ಈಗಾಗಲೇ ಪರಿಣಾಮಕಾರಿ ಮಾರ್ಗಗಳನ್ನು ಕೈಗೊಂಡಿದ್ದೇವೆ. ಆರೋಗ್ಯ ಸೌಲಭ್ಯಗಳ ಅಭಿವೃದ್ಧಿಯನ್ನೂ ಮಾಡಿದ್ದೇವೆ ಎಂದರು. ಇದೇ ವೇಳೆ ಗ್ರಾಮೀಣ ಮತ್ತು ಸಂಪರ್ಕಕ್ಕೆ ಸಿಗದ ಪ್ರದೇಶಗಳತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಸೂಚಿಸಿದರು.
ರಾಜ್ಯದ 17 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಭಾಗಿ
ಸಂವಾದದಲ್ಲಿ 17 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಉಸ್ತುವಾರಿ ಸಚಿವರು, ಸಿಎಂ ಯಡಿಯೂರಪ್ಪ ಭಾಗಿಯಾಗಿದ್ದರು. ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಉತ್ತರಕನ್ನಡ, ತುಮಕೂರು, ಹಾಸನ, ಬಳ್ಳಾರಿ, ಮೈಸೂರು, ಮಂಡ್ಯ, ಕಲಬುರಗಿ, ರಾಯಚೂರು, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೊಡಗು, ಕೋಲಾರ ಹಾಗೂ ಧಾರಾವಾಡ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸಂವಾದದಲ್ಲಿ ಭಾಗಿಯಾಗಿದ್ದರು.