ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಅಕ್ರಮ ಮದ್ಯ ಮಾರಾಟ ಮಾಡಿರುವ ಪ್ರಕರಣಕ್ಕೆ ಸಂಬಂಧಿಸದಂತೆ ಇಬ್ಬರು ಆರೋಪಿಗಳನ್ನು ಪೋಲಿಸರು ಹೆಬ್ರಿಯಲ್ಲಿ ಸೋಮವಾರ ರಾತ್ರಿ ಬಂಧಿಸಿದ್ದಾರೆ. ವೆಂಕಟೇಶ್ ಮತ್ತು ವಿಠಲ್ ಹೆಗ್ಡೆ ಬಂಧಿತ ಆರೋಪಿಗಳು. ಬಂಧಿತರಿಂದ 2 ರಟ್ಟಿನ ಬಾಕ್ಸ್ ನಲ್ಲಿದ್ದ 4777 ರೂ. ಮೌಲ್ಯದ ಅರವತ್ತೆಂಟು ಮದ್ಯ ತುಂಬಿದ ಪ್ಯಾಕೆಟ್ ಹಾಗೂ ಮಾರಾಟದಿಂದ ಸಂಗ್ರಹವಾದ ಸಾವಿರದ ಇನ್ನೂರು ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಹೆಬ್ರಿಯ ಲಾಡ್ಜ್ ಒಂದರಲ್ಲಿ ಇಬ್ಬರು ವ್ಯಕ್ತಿಗಳು 2 ಬಾಕ್ಸ್ ಗಳಲ್ಲಿ ಅಕ್ರಮವಾಗಿ ಮದ್ಯವನ್ನು ದಾಸ್ತಾನು ಮಾಡಿ ಅದನ್ನು ಗಿರಾಕಿಗಳಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಹೆಬ್ರಿ ಪೊಲೀಸರು ದಾಳಿ ನಡೆಸಿ ಇಬ್ಬರು ವ್ಯಕ್ತಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದ ಮುಂದಿನ ತನಿಖೆಯನ್ನು ಹೆಬ್ರಿ ಠಾಣಾಧಿಕಾರಿ ಮಹೇಶ್ ಟಿ.ಎಂ ಇವರು ನಡೆಸುತ್ತಿದ್ದಾರೆ.
Advertisement. Scroll to continue reading.
In this article:Diksoochi news, diksoochi Tv, diksoochi udupi, hebri, illigal liquor sale
Click to comment