ವರದಿ : ಬಿ.ಎಸ್. ಆಚಾರ್ಯ
ಬ್ರಹ್ಮಾವರ: ಬ್ರಹ್ಮಾವರ ತಾಲೂಕು ತಹಶೀಲ್ದಾರ ಕಿರಣ್ ಗೌರಯ್ಯ ಮತ್ತು ಕಂದಾಯ ಇಲಾಖೆಯ ತಂಡ ಮಂಗಳವಾರ ನಾನಾ ಭಾಗದಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುವ ಮಹತ್ವದ ಕಾರ್ಯ ಕೈಗೊಂಡಿದ್ದರು. ಈ ವೇಳೆ ಬಾರಕೂರು ಹಾಸ್ಟೆಲ್ ಒಂದರಲ್ಲಿ ಹೊರ ರಾಜ್ಯದ 16 ವಿದ್ಯಾರ್ಥಿಗಳ ಯೋಗ ಕ್ಷೇಮ ವಿಚಾರಿಸಿ, ಕೋವಿಡ್ ಹಿನ್ನೆಲೆಯಲ್ಲಿ ಹೊರಗಡೆ ತಿರುಗಾಡದಂತೆ ಸೂಚಿಸಿ ಅಗತ್ಯ ಸಾಮಾಗ್ರಿಗಳನ್ನು ನೀಡಿದರು.
ಕೋಟ ಕಂದಾಯ ನಿರೀಕ್ಷಕ ರಾಜು, ಗ್ರಾಮ ಲೆಕ್ಕಿಗರಾದ ಚೆಲುವರಾಜು, ಭೀಮರಾಜ ಹೊರಟ್ಟಿ, ಹನೆಹಳ್ಳಿ ಗ್ರಾಮಪಂಚಾಯತಿ ಅಭಿವೃದ್ಧಿ ಅಧಿಕಾರಿ ಅರುಂಧತಿ ಏಸುಮನೆ, ಆರೋಗ್ಯ ಕಾರ್ಯಕರ್ತೆ ಪಲ್ಲವಿ ಇನ್ನಿತರು ಹಾಜರಿದ್ದರು.
Advertisement. Scroll to continue reading.