ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಉಡುಪಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿದ್ದು .ಅದರಲ್ಲಿಯೂ ಹೆಬ್ರಿ ತಾಲ್ಲೂಕಿನಲ್ಲಿ ಪ್ರಕರಣ ಸಂಖ್ಯೆ ಹೆಚ್ಚಿದೆ ಅದಕ್ಕಾಗಿ ಜಿಲ್ಲಾಡಳಿತ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಫೋಕಸ್ ನೀಡಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು. ಇವರು ಗುರುವಾರ ಹೆಬ್ರಿಗೆ ಭೇಟಿ ನೀಡಿ ಮಾತನಾಡಿದರು.
ಹೆಬ್ರಿ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಡಾಕ್ಟರ್ ಹತ್ತಿರ ಮಾತನಾಡಿ ಆಕ್ಸಿಜನ್ ಯಾವ ಪೇಷೆಂಟಿಗೆ ಅಗತ್ಯವಿಲ್ಲವೋ ಅವರಿಗೆ ಇಲ್ಲೇ ಚಿಕಿತ್ಸೆ ಕೊಡಿ .ಯಾರಿಗೆ ಆಕ್ಸಿಜನ್ ಅಗತ್ಯವಿದೆ ಅವರನ್ನು ಉಡುಪಿ ಅಥವಾ ಕಾರ್ಕಳಕ್ಕೆ ಶಿಫ್ಟ್ ಮಾಡಿ ಎಂದು ಹೇಳಿದ್ದೇನೆ. ಹೆಬ್ರಿ ವೈದ್ಯರು ಬಾಳ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಹೆಬ್ರಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆ ಕಾರಣ ಇವತ್ತು ನಾನು ಇಲ್ಲಿಗೆ ಭೇಟಿ ನೀಡಿದ್ದು. ತಹಶೀಲ್ದಾರ್ ಮತ್ತು THO ಹತ್ತಿರ ಮಾತನಾಡಿದ್ದೇನೆ. ನಮ್ಮ ಉದ್ದೇಶ ಹೆಬ್ರಿ ಕರೋನದಿಂದ ಮುಕ್ತ ಆಗಬೇಕು ಎನ್ನುವುದು ನಮ್ಮ ಉದ್ದೇಶ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. ತಹಶೀಲ್ದಾರ್ ಪುರಂದರ್ ಕೆ. ಹೆಬ್ರಿ, ಪೊಲೀಸ್ ಠಾಣಾಧಿಕಾರಿ ಮಹೇಶ್ T.M ಹಾಗೂ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು .