Connect with us

Hi, what are you looking for?

Diksoochi News

Uncategorized

ಏರ್ ಇಂಡಿಯಾ ಮೇಲೆ ಬೃಹತ್ ಸೈಬರ್ ದಾಳಿ; ಲಕ್ಷಾಂತರ ಪ್ರಯಾಣಿಕರ ಮಾಹಿತಿ ಸೋರಿಕೆ

0

ನವದೆಹಲಿ : ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಮೇಲೆ ಬೃಹತ್ ಸೈಬರ್ ದಾಳಿ ನಡೆದಿದೆ. ಲಕ್ಷಾಂತರ ಪ್ರಯಾಣಿಕರ ವೈಯಕ್ತಿಕ ವಿವರಗಳು ಕಳವಾಗಿದೆ. ಫೆಬ್ರವರಿಯಲ್ಲಿ ಡೇಟಾ ಪ್ರಾಸೆಸರ್ ಮೇಲೆ ಭಾರೀ ದಾಳಿ ನಡೆದಿದ್ದು, ಸುಮಾರು ಹತ್ತು ವರ್ಷಗಳ ಅವಧಿಯ ಏರ್ ಇಂಡಿಯಾ ಗ್ರಾಹಕರ ಕ್ರೆಡಿಟ್ ಕಾರ್ಡ್, ಪಾಸ್ ಪೋರ್ಟ್, ಫೋನ್ ನಂಬರ್ ಸೇರಿದಂತೆ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ ಎಂದು ವಿಮಾನಯಾನ ಸಂಸ್ಥೆ ಪ್ರಕಟಿಸಿದೆ.
ಇದು ವಿಶ್ವಾದ್ಯಂತ 4,500,000 ದತ್ತಾಂಶದ ಮೇಲೆ ಪರಿಣಾಮ ಬೀರಿದೆ ಮತ್ತು ಆಗಸ್ಟ್ 26,2011 ಹಾಗೂ ಫೆಬ್ರವರಿ 3, 2021 ರ ನಡುವೆ ನೋಂದಣಿಯಾದವರ ವೈಯಕ್ತಿಕ ಮಾಹಿತಿಗಳನ್ನು ಒಳಗೊಂಡಿದೆ ಎಂದು ಏರ್ ಇಂಡಿಯಾ ಮಾಹಿತಿ ನೀಡಿದೆ.


ಪ್ರಯಾಣಿಕರ ಸೇವಾ ವ್ಯವಸ್ಥೆ ಡೇಟಾ ಪ್ರಾಸೆಸರ್ ಮೇಲೆ ಸಿಟಾ ಪಿಎಸ್ ಎಸ್ ಮೇಲೆ ಸೈಬರ್ ಕಳ್ಳರು ದಾಳಿ ನಡೆಸಿದ್ದು, ಕೆಲವು ಪ್ರಯಾಣಿಕರ ಮಾಹಿತಿ ಸೋರಿಕೆಗೆ ಕಾರಣವಾಗಿದೆ. ಹೆಸರು, ಹುಟ್ಟಿದ ದಿನಾಂಕ, ಸಂಪರ್ಕ ಮಾಹಿತಿ, ಪಾಸ್ ಪೋರ್ಟ್, ಟಿಕೆಟ್, ಕ್ರೆಡಿಟ್ ಕಾರ್ಡ್, ಸ್ಟಾರ್ ಅಲಯನ್ಸ್ ಹಾಗೂ ಏರ್ ಇಂಡಿಯಾ ಪ್ರಯಾಣಿಕರ ಮಾಹಿತಿಯನ್ನು ಇದು ಒಳಗೊಂಡಿದೆ. ಪ್ರಯಾಣಿಕರು ಸಾಧ್ಯವಾದಗಲೆಲ್ಲಾ ಪಾಸ್ ವರ್ಡ್ ಬದಲಾಯಿಸುವಂತೆ ತಿಳಿಸಲಾಗಿದೆ. ಕ್ರೆಡಿಟ್ ಕಾರ್ಡ್ ಹೊಂದಿರುವ ಸಿವಿವಿ\ಸಿವಿಸಿ ಡೇಟಾ ಸಂಗ್ರಹಿಸಲಾಗಿಲ್ಲ. ದಾಳಿಗೊಳಗಾದ ಪ್ರಯಾಣಿಕರಿಗಾಗಿ ಕಾಲ್ ಸೆಂಟರ್ ನ್ನು ಸಂಸ್ಥೆಯು ಸ್ಥಾಪಿಸಿದ್ದು, ತನಿಖೆ ಮುಂದುವರೆದಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!