ಖ್ಯಾತ ಗಾಯಕಿ ಶ್ರೇಯಾ ಘೋಷಲ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. `ದೇವರ ಆಶೀರ್ವಾದದಿಂದ ಇಂದು ಗಂಡು ಮಗು ಪ್ರಾಪ್ತಿಯಾಗಿದೆ. ನಾನು ಎಂದೂ ಇಷ್ಟು ಭಾವುಕ ಆಗಿರಲಿಲ್ಲ. ಪತಿ ಶಿಲಾದಿತ್ಯ ಸೇರಿ ನನ್ನ ಕುಟುಂಬದವರೆಲ್ಲ ಅತೀವ ಖುಷಿಯಲ್ಲಿದ್ದೇವೆ. ನಿಮ್ಮ ಅಗಣಿತ ಆಶೀರ್ವಾದಗಳಿಗೆ ಧನ್ಯವಾದ’ ಎಂದು ಫೇಸ್ ಬುಕ್ ನಲ್ಲಿ ಶ್ರೇಯಾ ಘೋಷಾಲ್ ಸಂತಸ ಹಂಚಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ದಂಪತಿಗೆ ಅಭಿನಂಧನೆಯ ಮಹಾಪೂರವನ್ನೇ ಹರಿಸಿದ್ದಾರೆ. ಜೊತೆಗೆ ನಟ, ನಟಿಯರು, ಸಂಗೀತ ನಿರ್ದೇಶಕರುಗಳೂ ಶುಭಾಶಯ ಹೇಳಿದ್ದಾರೆ.
10 ವರ್ಷಗಳಿಂದ ಪ್ರೀತಿಸುತ್ತಿದ್ದ, ಶ್ರೇಯಾ ಹಾಗೂ ಶಿಲಾದಿತ್ಯ ದಾಂಪತ್ಯ 2005ರಲ್ಲಿ ಜೀವನಕ್ಕೆ ಕಾಲಿಟ್ಟಿದ್ದರು.
Advertisement. Scroll to continue reading.