ಉಳ್ಳಾಲ : ಮಂಗಳೂರಿನ ದಕ್ಕೆಯಿಂದ ಮೀನುಗಾರಿಕೆಗೆ ತೆರಳುತ್ತಿದ್ದ ಬೋಟ್ ಅವಘಡಕ್ಕೀಡಾದ ಘಟನೆ ಉಳ್ಳಾಲ ಕೋಡಿಯಲ್ಲಿ ನಡೆದಿದೆ. ಉಳ್ಳಾಲದ ಅಶ್ರಫ್ ಎಂಬವರಿಗೆ ಸೇರಿದ ಅಝಾನ್ ಎಂಬ ಹೆಸರಿನ ಬೋಟ್ ಇದಾಗಿದ್ದು, ಅವಘಡಕ್ಕೀಡಾಗಿ ದಡ್ಡಕ್ಕೆ ಬಂದು ಅಪ್ಪಳಿಸಿದ್ದು, ಬೋಟ್ ನಲ್ಲಿದ್ದ 10 ಮಂದಿಯನ್ನು ರಕ್ಷಿಸಲಾಗಿದೆ. ಭಾನುವಾರ ನಸುವಿನ ಸಮಯದಲ್ಲಿ ಆಳಸಮುದ್ರ ಮೀನುಗಾಕೆಗೆ ಮೀನುಗಾರರು ತೆರಳಿದ್ದು, ಕನ್ಯಾಕುಮಾರಿ ಮೂಲದ ಐದು ಮಂದಿ ಮೀನುಗಾರರು ಕುಡಿತದ ಮತ್ತಿನಲ್ಲಿದ್ದರು. ದಡಕ್ಕೆ ಅಪ್ಪಳಿಸಿದಾಗ ಮೀನುಗಾರರು ವಾಂತಿ ಮಾಡುತ್ತಿದ್ದರು. ಈ ವೇಳೆ ಚಾಲಕ ಇನ್ನೋರ್ವನ ಕೈಗೆ ಬೋಟ್ ನೀಡಿದ ಪರಿಣಾಮದಿಂದಾಗಿ ಘಟನೆ ಸಂಭವಿಸಿದೆ ಎನ್ನಲಾಗಿದೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.