ವರದಿ: ಶಫೀ ಉಚ್ಚಿಲ
ಕಾಪು : ಕೊರೊನಾ ಎರಡನೇ ಅಲೆ ತೀವ್ರವಾಗುತ್ತಿದ್ದಂತೆ ಪರಿಸ್ಥಿತಿಯನ್ನು ಸುಧಾರಿಸಲು ಸರಕಾರ ಲಾಕ್ಡೌನ್ ಘೋಷಣೆ ಮಾಡಿದ್ದು,ಈ ಸಂದರ್ಭದಲ್ಲಿ ಊಟಕ್ಕಾಗಿ ಪರದಾಡುತ್ತಿದ್ದ ಬಡವರು, ದಾರಿಹೋಕರು, ನಿರ್ಗತಿಕರು ಹಾಗು ಭಿಕ್ಷುಕರಿಗೆ ಊಟದ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಪಡುಬಿದ್ರಿಯ ಯುವಕರ ತಂಡ ಮಾನವೀಯತೆ ಮೆರೆದಿದೆ.
ಕಳೆದ 27 ದಿನಗಳಿಂದ ಈ ತಂಡ ಮನೆಯನ್ನೇ ಊಟ ತಯಾರಿಸುವ ಕೇಂದ್ರವನ್ನಾಗಿಸಿ ಪ್ರತಿನಿತ್ಯ ದಾನಿಗಳ ಸಹಕಾರದಿಂದ “ಹಸಿದವನಿಗೆ ಅನ್ನ” ಎಂಬ ಘೋಷಣೆಯಡಿ ಉತ್ತಮ ಗುಣಮಟ್ಟದ ಊಟವನ್ನು ತಯಾರಿಸಿ ತಮ್ಮ ವಾಹನದಲ್ಲಿ ತುಂಬಿಕೊಂಡು ಪಡುಬಿದ್ರಿ, ಹೆಜಮಾಡಿ, ನಂದಿಕೂರು ಪರಿಸರದಲ್ಲಿರುವ ಕೆಲವೊಂದು ಅತೀ ಬಡವರಿಗೆ ಹಾಗು ದಾರಿಯಲ್ಲಿ ಕಾಣ ಸಿಗುವ ದಾರಿ ಹೋಕರ ಹಸಿವನ್ನು ನೀಗಿಸುತ್ತಾರೆ. ಬಳಿಕ ಉಡುಪಿಯಲ್ಲಿರುವ ನಿರಾಶ್ರಿತರ ಕೇಂದ್ರಕ್ಕೆ ತೆರಳಿ ಅಲ್ಲಿರುವ ಸುಮಾರು 80 ಜನ ನಿರಾಶ್ರಿತರ ಹೊಟ್ಟೆ ತುಂಬುವ ಕೆಲಸದಲ್ಲಿ ತೊಡಗಿರುವುದು ನಿಜಕ್ಕೂ ಶ್ಲಾಘನೀಯ
ಈ ತಂಡದಲ್ಲಿ ಎಂ.ಎಸ್ ನಿಜಾಮ್, ಎಂ.ಎಸ್ ಶಾಪಿ, ಜ್ಯೋತಿ ಮೆನನ್ ,ಜಮೀರ್ ಕಂಚಿನಡ್ಕ,ಅಜೀಜ್ ಕೊಂಬನ್ ,ಶಫೀಕ್,ಇಮ್ರಾನ್, ಸಮದ್,ನೌಝಲ್, ಮಯ್ಯದ್ದಿ,ರೌಫ್, ಯಾಸೀರ್ ,ಅಬ್ದುರ್ರಹ್ಮಾನ್ ಹಾಗೂ ಅಬೂಬಕ್ಕರ್
ಇದರ ನೇತ್ರತ್ವ ವಹಿಸಿದ್ದು,ಸ್ಥಳೀಯ ಸಮಾನ ಮನಸ್ಕ ಯುವಕರು ಸಾಥ್ ನೀಡಿದ್ದಾರೆ.