Connect with us

Hi, what are you looking for?

Diksoochi News

Uncategorized

ಉಡುಪಿ : ರೋಬೋಸಾಫ್ಟ್ ಸಂಸ್ಥೆಯಿಂದ 7 ಆಕ್ಸಿಜನ್ ಕಾನ್ಸಂಟ್ರೇಟರ್, 1000 ಫಲ್ಸ್ ಆಕ್ಸಿ ಮೀಟರ್ ಕೊಡುಗೆ

0

ಉಡುಪಿ : ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಆಕ್ಸಿಜನ್ ಕೊರತೆಯಾಗದಂತೆ ಹಾಗೂ ಇನ್ನಿತರ ಸಹಕಾರಕ್ಕಾಗಿ ಶಾಸಕ ಕೆ. ರಘುಪತಿ ಭಟ್ ಅವರು ದಾನಿಗಳಲ್ಲಿ ಹಾಗೂ ಕೈಗಾರಿಕೋದ್ಯಮಿಗಳಲ್ಲಿ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿರುವ ರೋಬೋಸಾಫ್ಟ್ ಸಂಸ್ಥೆ ಶುಕ್ರವಾರ ಶಾಸಕ ಕೆ. ರಘುಪತಿ ಭಟ್ ಅವರ ಸಮ್ಮುಖದಲ್ಲಿ 7 ಆಕ್ಸಿಜನ್ ಕಾನ್ಸಂಟ್ರೇಟರ್ ಹಾಗೂ 1000 ಫಲ್ಸ್ ಆಕ್ಸಿ ಮೀಟರ್ ರನ್ನು ಜಿಲ್ಲಾಧಿಕಾರಿಯವರ ಮುಖಾಂತರ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು.


ಈ ಸಂದರ್ಭ 20.00 ಲಕ್ಷ ರೂ. ವೆಚ್ಚದಲ್ಲಿ 10 ಲೀಟರ್ ಸಾಮಥ್ರ್ಯದ ಆಕ್ಸಿಜನ್ ಕಾನ್ಸಂಟ್ರೇಟರ್ ಹಾಗೂ ಫಲ್ಸ್ ಆಕ್ಸಿ ಮೀಟರ್ ಕೊಡುಗೆಯಾಗಿ ನೀಡಿದ ರೋಬೋಸಾಫ್ಟ್ ಸಂಸ್ಥೆಗೆ ಹಾಗೂ ಅವರ ಸಾಮಾಜಿಕ ಕಳಕಳಿಗೆ ಶಾಸಕ ಕೆ. ರಘುಪತಿ ಭಟ್ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ರೋಬೋಸಾಫ್ಟ್ ಸಂಸ್ಥೆಯ ಆಡಳಿತ ನಿರ್ದೇಶಕ ರೋಹಿತ್ ಭಟ್, ಆರ್ಥಿಕ ನಿರ್ದೇಶಕರಾದ ಸುಧೀರ್ ಭಟ್, ಜಿಲ್ಲಾ ಆರೋಗ್ಯಾಧಿಕಾರಿ ಸುಧೀರ್ ಚಂದ್ರ ಸೂಡ, ಜಿಲ್ಲಾ ಶಸ್ತ್ರಚಿಕಿತ್ಸಕ ಮಧುಸೂದನ್ ನಾಯಕ್, ಕೋವಿಡ್ ನೋಡಲ್ ಅಧಿಕಾರಿ ಪ್ರಶಾಂತ್ ಭಟ್ ಹಾಗೂ ಇತರ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!