ವರದಿ : ಶಫೀ ಉಚ್ಚಿಲ
ಕಾಪು : ಪಡುಬಿದ್ರಿ ಹಾಗು ಕಾಪು ಬಳಿ ಸಮುದ್ರದಲ್ಲಿ ಟಗ್ ದುರಂತಕ್ಕೀಡಾಗಿ 17 ದಿನವಾದರೂ ತೆರವು ಮಾಡುವ ಬಗ್ಗೆ ಸರ್ಕಾರ ಸ್ಪಂದಿಸದೆ ಸಾಂಪ್ರಾದಾಯಿಕ ಮೀನುಗಾರಿಕೆಯನ್ನೇ ನಂಬಿದ ಮೀನುಗಾರರಿಗೆ ಸಂಕಷ್ಟ ತಂದೊಡ್ಡಿದೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಆರೋಪಿಸಿದರು.
ಕಾಪು ಬಳಿ ಸಮುದ್ರದಲ್ಲಿ ಟಗ್ ದುರಂತಕ್ಕೀಡಾಗಿ 50 ಗಂಟೆ ಬಳಿಕ ಅದರಲ್ಲಿದ್ದ ಸಿಬ್ಬಂದಿಯನ್ನು ರಕ್ಷಿಸಲಾಗಿತ್ತು. ಅದರ ಲಾಭ ಪಡೆಯುವ ಸಲುವಾಗಿ ರಾಜ್ಯ ಸರ್ಕಾರದ ಸಚಿವರು, ಲೋಕಸಭಾ ಸದಸ್ಯರ ಸಹಿತ ಬಿಜೆಪಿ ಜನಪ್ರತಿನಿಧಿಗಳು ತಮ್ಮನ್ನು ತಾವೇ ಅಭಿನಂದಿಸುವ ಪೈಪೋಟಿಯಲ್ಲಿ ತೊಡಗಿದ್ದರು. ಪಡುಬಿದ್ರಿಯಲ್ಲಿನ ಟಗ್ 11 ದಿನಗಳ ಬಳಿಕ ಸುಸ್ಥಿತಿಗೆ ತರಲಾಗಿತ್ತು. ಟಗ್ ತೆರವು ಮಾಡದೆ, ಸಾಂಪ್ರದಾಯಿಕ ಮೀನುಗಾರಿಕೆಗೆ ಅಡ್ಡಿಯಾಗಿದೆ.ಕೊರೊನಾ ಲಾಕ್ಡೌನ್ನಿಂದ ಮೊದಲೇ ಸಂಕಷ್ಟದಲ್ಲಿರುವ ಮೀನುಗಾರರು ಸರಕಾರದ ಸ್ಪಂದನೆಯಿಲ್ಲದೆ ಹೋರಾಟದ ಹಾದಿ ತುಳಿದಿದ್ದು, ಕಾಂಗ್ರೆಸ್ ಪಕ್ಷವು ಕೂಡಾ ಅವರ ಹೋರಾಟಕ್ಕೆ ಬೆಂಬಲ ನೀಡಲಿದೆ ಎಂದರು.
ಕಾಪು ಬ್ಲಾಕ್ ದಕ್ಷಿಣ ಅಧ್ಯಕ್ಷ ನವೀನಚಂದ್ರ ಸುವರ್ಣ, ಕಾಪು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಸಾದಿಕ್ ದೀನಾರ್, ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಶರ್ಫುದ್ದೀನ್ ಶೇಖ್, ಕಾಪು ಬ್ಲಾಕ್ ಕಾಂಗ್ರೆಸ್ ಕೋಶಾಧಿಕಾರಿ ಹರೀಶ್ ನಾಯಕ್, ಪ್ರಮುಖರಾದ ಶಾಬು ಸಾಹೇಬ್, ರಮೀಜ್ ಹುಸೇನ್, ಶಾಂತಲತಾ ಶೆಟ್ಟಿ, ಕೆ.ಎಚ್.ಉಸ್ಮಾನ್, ಸೌಮ್ಯ, ಮಾಲಿನಿ, ಅಮೀರ್ ಉಪಸ್ಥಿತರಿದ್ದರು.