ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಹಸಿರನ್ನು ಹೊದ್ದು ನಿಂತಿರುವ ಬೀಡಾ ಅಂಗಡಿಯೊಂದು ಬಾರಕೂರು ಭಾಗದಲ್ಲಿ ಗಮನ ಸೆಳೆಯುತ್ತಿದೆ. ಅಂಗಡಿ ಮಾಲೀಕ ಮಾಧವ ಬಾರಕೂರು ತಮ್ಮ ಪುಟ್ಟ ಅಂಗಡಿಯನ್ನು ಹೀಗ ಹಸಿರ ಹೊದೆಸಿ ಚೆಂದಗಾಣಿಸಿದ್ದಾರೆ. ಅಂಗಡಿಯ ಎದುರುಗಡೆ ಸರ್ವ ಋತುವಿನಲ್ಲಿ ಕೂಡಾ ತಂಪು ನೀಡುವ ಹಲವಾರು ಹೂಗಿಡವನ್ನು ನೆಡಲಾಗಿದ್ದು ಎಲ್ಲರ ಕಣ್ಮನ ಸೆಳೆಯುತ್ತಿದೆ. ಇಲ್ಲಿ ಬೀಡಾ, ಪೇಪರ್ ಗಳನ್ನು ಮಾರಾಟ ಮಾಡಲಾಗುತ್ತದೆ.
ಅಂಗಡಿಗೆ ಬರುವವರು ಕೊಂಚ ಹೊತ್ತು ಇಲ್ಲಿನ ತಂಪಾದ ವಾತಾವರಣಕ್ಕೆ ಕುಳಿತು ವಿಶ್ರಾಂತಿ ಪಡೆದು ಹೋಗುವುದೂ ಉಂಟು. ಎಲ್ಲಾ ಕಾಲದಲ್ಲೂ ಗಿಡಗಳ ರಕ್ಷಣೆ ಮಾಡಿ ಮಾಧವ ಅವರು ಮೆಚ್ಚುಗೆ ಪಡೆದಿದ್ದಾರೆ.
Advertisement. Scroll to continue reading.