ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಗ್ರಾಮೀಣ ಭಾಗದಲ್ಲಿ ಹಲವಾರು ಸಮಾಜ ಸೇವೆ ಮಾಡುತ್ತಿರುವ ಕ್ರೀಯಾಶೀಲ ಲಯನ್ಸ್ ಕ್ಲಬ್ ಉಪ್ಪೂರು, ಹಾವಂಜೆ ಕೋವಿಡ್ ಸಂದರ್ಭದಲ್ಲಿ ಕೂಡಾ ಸಾರ್ವಜನಿಕರ ಸಂಕಷ್ಟಗಳಿಗೆ ನೆರವು ನೀಡುತ್ತಿದೆ. ಇದೀಗ ಹಾವಂಜೆಯ ಜಸ್ಟೀಸ್ ಕೆ .ಸದಾನಂದ ಹೆಗ್ಡೆಯವರ ಸವಿ ನೆನಪಿಗಾಗಿ ಅವರ ಕುಟುಂಬಿಕರಾದ ಲಯನ್ಸ್ ಕ್ಲಬ್ ಅಧ್ಯಕ್ಷ ಎಚ್. ನಾಗರಾಜ್ ಹೆಗ್ಡೆ ವಿನಂತಿಯ ಮೇರೆಗೆ ನಿಟ್ಟೆ ಎಜುಕೇಶನಲ್ ಟ್ರಸ್ಟ್ ವತಿಯಿಂದ ಗ್ರಾಮದ 500 ಮಂದಿಗೆ ಉಚಿತ ಕೋವಿಡ್ ವ್ಯಾಕ್ಸಿನೇಶನ್ ನೀಡುವುದಕ್ಕೆ ಟ್ರಸ್ಟ್ ಅಧ್ಯಕ್ಷ ಕೆ. ವಿನಯ ಹೆಗ್ಡೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಎಚ್. ನಾಗರಾಜ್ ಹೆಗ್ಡೆ ತಿಳಿಸಿದ್ದಾರೆ.
ಕೋವಿಡ್ ನಿಯಮದಂತೆ ನಡೆಯಲು ಕಾರ್ಯಕ್ರಮದ ರೂಪುರೇಶೆ ನಡೆಯುತ್ತಿದ್ದು, ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಇಲ್ಲಿನ ಪರಿಸರದ 35 ಸಂಘ ಸಂಸ್ಥೆಗಳ ಸಹಕಾರದಲ್ಲಿ ಒಂದೇ ದಿನದಲ್ಲಿ ಇಲ್ಲಿನ ಮಹಾಲಿಂಗೇಶ್ವರ ದೇವಸ್ಥಾನ, ಸರಕಾರಿ ಶಾಲೆ, ಸಭಾಭವನ, ವಿಶ್ವಕರ್ಮ ಸಭಾ ಭವನ, ಜಾನಪದ ಕಲಾ ಕೇಂದ್ರ ಸೇರಿದಂತೆ ಹಲವು ಕಡೆಯಲ್ಲಿ ಲಸಿಕೆ ನೀಡಲು ಕಾರ್ಯಕ್ರಮಕ್ಕೆ ದಿನ ನಿಗದಿಯಾಗಲಿದೆ. ಕೋವಿಡ್ ವ್ಯಾಕ್ಸಿನ್ ಪಡೆಯಲು ಇಚ್ಚಿಸುವ ಗ್ರಾಮದ ಜನರು ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ 9242165031 ಮತ್ತು 7259905703 ಸಂಖ್ಯೆಗೆ ಸಂಪರ್ಕಿಸಲು ಕೋರಲಾಗಿದೆ.
ಹಿರಿಯ ನಾಗರೀಕರಿಗೆ ಮತ್ತು ಅಶಕ್ತರಿಗೆ ಅವರ ಮನೆಗೆ ಹೋಗಿ ವ್ಯಾಕ್ಸಿನ್ ನೀಡಲಾಗುತ್ತಿದು,್ದ ಸಾರ್ವಜನಿಕರು ಇದರ ಸದುಪಯೋಗ ಪಡೆಯಲು ಕೋರಲಾಗಿದೆ.