ಕಾಪು : ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ 50 ಕ್ಕೂ ಅಧಿಕ ಸೋಂಕು ದೃಡಪಟ್ಟ ಉಡುಪಿ ಜಿಲ್ಲೆಯ ಕೆಲವು ಗ್ರಾಮಗಳಿಗೆ ಸಂಪೂರ್ಣ ಲಾಕ್ಡೌನ್ ವಿಧಿಸಿ ಆದೇಶ ಹೊರಡಿಸಲಾಗಿದ್ದು,ಲಾಕ್ಡೌನ್ ಮಾಡಲ್ಪಟ್ಟ ಪಡುಬಿದ್ರಿ ಗ್ರಾಮಕ್ಕೆ ಗುರುವಾರ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪಡುಬಿದ್ರಿ ಪೇಟೆಯಲ್ಲಿ ವೀಕ್ಷಣೆ ಮಾಡಿದ ಅವರು ಪಡುಬಿದ್ರಿ ಗ್ರಾಮ ಪಂಚಾಯತ್ ಪಿಡಿಒ ಪಂಚಾಕ್ಷರಿ ಕೆರಿಮಠ ಅವರಲ್ಲಿ ಮಾಹಿತಿ ಪಡೆದುಕೊಂಡರು. ಈ ವೇಳೆ ಮಾತನಾಡಿದ ಅವರು, ಕೊರೊನಾ ಸೋಕಿತರ ಸಂಖ್ಯೆ ಬಹುತೇಕ ಇಳಿಮುಖವಾಗುತ್ತಿದೆ. ಕೆಲವು ವಾರ್ಡ್ಗಳಲ್ಲಿ ಕೊವಿಡ್ ಪರೀಕ್ಷೆ ಸಂಖ್ಯೆ ಹೆಚ್ಚಿಸಿರುವ ಹಿನ್ನೆಲೆ ಫಲಿತಾಂಶದ ಸಂಖ್ಯೆಯಲ್ಲೂ ಹೆಚ್ಚಳ ಕಂಡು ಬರುತ್ತಿವೆ. ಕೆಲವು ಪಂಚಾಯತಿಗಳಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದ್ದು,ಅಂತಹ ಗ್ರಾಮ ಪಂಚಾಯತಿಯನ್ನು ಸಂಪೂರ್ಣ ಲಾಕ್ಡೌನ್ ಮಾಡಲಾಗುವುದು ಎಂದರು.
Advertisement. Scroll to continue reading.