ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಇಂದು ಬ್ರಹ್ಮಾವರ ಬೈಕಾಡಿ ಸಸ್ಯ ಕ್ಷೇತ್ರದಲ್ಲಿ ಅರಣ್ಯ ಇಲಾಖೆ ವತಿಯಿಂದ ಬೆಳೆಸಿದ 17.748 ನಾನಾ ಜಾತಿಯ ಸಸ್ಯಗಳ ವಿತರಣೆ ಜರುಗಿತು. ಪತ್ರಕರ್ತ ಶಿವರಾಮ್ ಆಚಾರ್ಯರವರಿಗೆ ಗಿಡ ಕೊಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಇಲ್ಲಿನ ಉಪ ವಲಯ ಅರಣ್ಯಾಧಿಕಾರಿ ಹರೀಶ್ ಕೆ ಇವರ ಉಸ್ತುವಾರಿಯಲ್ಲಿ ಸುಮಾರು ಮೂವತ್ತು ಜಾತಿಯ ಸಸ್ಯಗಳನ್ನು ಒಂದು ವರ್ಷ ದಿಂದ ಬೆಳೆಸಲಾಗುತ್ತದೆ. ಶ್ರೀ ಗಂಧ, ಹಲಸು, ಮಾವು,ನೆರಳೆ, ರೆಂಜ, ಕಹಿಬೇವು, ಪುನರ್ ಪುಳಿ, ನಾಗಲಿಂಗ ಪುಷ್ಪ ಸೇರಿದಂತೆ ಅನೇಕ ಜಾತಿಯ ಸಸ್ಯಗಳನ್ನು ಬೆಳೆಸಲಾಗಿದೆ.
ಬಳಿಕ ಇಲ್ಲಿನ ಜನೌಷಧಿ ಕೇಂದ್ರ ಸೆರಿದಂತೆ ಅನೇಕ ಭಾಗದಲ್ಲಿ ಗಿಡನೆಡುವ ಮೂಲಕ ವನ ಮಹೋತ್ಸವ ಅಚರಿಸಲಾಯಿತು.
ಈ ಸಂದರ್ಭ ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕ ಹೆಚ್.ಪಿ.ಬ್ರ ರವಿರಾಜ್, ಆರ್ ಎಫ್ ರವೀಂದ್ರ ಆಚಾರ್ಯ, ಜಯಂಟ್ ಗ್ರೂಪ್ ಬ್ರಹ್ಮಾವರದ ಅಧ್ಯಕ್ಷ ಸುಂದರ ಪೂಜಾರಿ, ವಿಲ್ಸನ್, ಶ್ರೀನಾಥ್, ಮಧುಸೂದನ್ ಹೇರೂರು, ರಾಘವೇಂದ್ರ ಪ್ರಭು ಕರ್ವಾಲು ಉಪಸ್ಥಿತರಿದ್ದರು.