ನವದೆಹಲಿ : ಜೂನ್ 21 ರಿಂದ 18 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಲಸಿಕೆ ನೀಡಲಾಗುವುದು. ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರವು ಲಸಿಕೆ ಪೂರೈಸಲದೆ ಎಂದು ಮಹತ್ವದ ಮಾಹಿತಿಯನ್ನು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮುಂದಿನ ಎರಡು ವಾರಗಳ ಬಳಿಕ ಕೇಂದ್ರವೇ ಲಸಿಕೆ ನೀಡಲಿದೆ. ಉಚಿತ ಲಸಿಕೆ ಬೇಡ ಅನ್ನುವವರಿಗೆ ಖಾಸಗೀ ಅಸ್ಪತ್ರೆಯಲ್ಲಿ ಲಸಿಕೆ ನೀಡಲಾಗುವುದು. ಖಾಸಗಿ ಆಸ್ಪತ್ರೆಗಳು 150 ರೂ. ಪಡೆಯ ಬೇಕು. ವ್ಯಾಕ್ಸಿನ್ ನ ಪ್ರತೀ ಡೋಸ್ ಮಹತ್ವಪೂರ್ಣವಾದುದು ಎಂದು ಅವರು ತಿಳಿಸಿದ್ದಾರೆ.
ಇಂದು ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದಾರೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ವಿಸ್ತರಣೆ ಮಾಡಿ ಘೋಷಿಸಿದ್ದಾರೆ. 8 ತಿಂಗಳ ಕಾಲ ದೇಶದ ಜನರಿಗೆ ಉಚಿತ ಆಹಾರ ಧಾನ್ಯದ ವ್ಯವಸ್ಥೆ. 80 ಕೋಟಿ ಜನರಿಗೆ ದೀಪಾವಳಿವರೆಗೂ ಉಚಿತ ಆಹಾರ ಧಾನ್ಯ ನೀಡಲಾಗುವುದು ಎಂದು ಅವರು ಘೋಷಿಸಿದ್ದಾರೆ.
ಪ್ರಪಂಚದ ಅನೇಕ ದೇಶಗಳಂತೆ ನಮ್ಮ ದೇಶವೂ ಕೊರೋನಾ ಎರಡನೇ ಅಲೆಯೊಂದಿಗೆ ಹೋರಾಡುತ್ತಿದೆ. ನಮ್ಮಲ್ಲಿ ಹಲವರು ತಮ್ಮವರನ್ನು ಕಳೆದುಕೊಂಡಿದ್ದಾರೆ. ಇಂತಹ ಕುಟುಂಬಗಳೊಂದಿಗೆ ನನ್ನ ಸಂತಾಪವಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ 100 ವರ್ಷಗಳಲ್ಲಿ ಇಂತಹ ಮಹಾಮಾರಿಯನ್ನು ಆಧುನಿಕ ಜಗತ್ತು ನೋಡಿಲ್ಲ, ಅನುಭವಿಸಿಲ್ಲ. ಮಾಹಾಮಾರಿಯ ವಿರುದ್ಧ ಹೋರಾಡಲು ಸರ್ಕಾರ ಹಲವು ಆಸ್ಪತ್ರೆಗಳನ್ನು ನಿರ್ಮಿಸಿದೆ. ಇದುವರೆಗೆ ಭಾರತದ ಇತಿಹಾಸದಲ್ಲಿಯೇ ಬಳಕೆ ಮಾಡದಷ್ಟು ಮೆಡಿಕಲ್ ಆಕ್ಸಿಜನ್ ಬಳಕೆಯಾಗಿದೆ, ಆಮ್ಲಜನಕ ಆಮದಿಗೆ ನೌಕಾ ಪಡೆ, ವಾಯುಸೇನೆಯನ್ನೂ ಬಳಸಿಕೊಂಡಿದೆ. ದೇಶದಲ್ಲಿ ವೈದ್ಯಕೀಯ ಆಮ್ಲಜನಕ ಉತ್ಪಾದನೆ ಶೇ.10 ರಷ್ಟು ಹೆಚ್ಚಳ ಮಾಡಲಾಗಿದೆ ಎಂದರು.
ಶತ್ರುವಿನ ವಿರುದ್ಧ ಅತ್ಯಂತ ಪ್ರಭಾವಿ ಅಸ್ತ್ರ ಕೋವಿಡ್ ಪೆÇ್ರೀಟೋಕಾಲ್. ಮಾಸ್ಕ್, ಅಂತರ ಕಾಯ್ದುಕೊಳ್ಳುವುದನ್ನು ಪಾಲಿಸಬೇಕು ಎಂದು ಅವರು ಕರೆ ನೀಡಿದ್ದಾರೆ.
ಮೋದಿ ಮಾತುಗಳು :
ಭಾರತದಲ್ಲಿ ವ್ಯಾಕ್ಸಿನ್ ತಯಾರಾಗದೆ ಹೋಗದೆ ಇದ್ದರೆ ಪರಿಸ್ಥಿತಿ ಏನಾಗುತ್ತಿತ್ತು? ಭಾರತದಂತಹ ವಿಶಾಲವಾದ ದೇಶ ಹೇಗಿರುತ್ತಿತ್ತು?
ಎಲ್ಲರಿಗೂ ಉಚಿತ ವ್ಯಾಕ್ಸಿನ್ ಕೊಡುವುದರಲ್ಲಿ ಭಾರತ ಮುಂದುವರೆಯುತ್ತಿದೆ. ಹೆಲ್ತ್ ವರ್ಕರ್ಸ್ ನಮ್ಮ ಪ್ರಂಟ್ ಲೈನ್ ವಾರಿಯರ್ಸ್ ಗೆ ಲಸಿಕೆ ಸಿಗದೇ ಹೋಗಿದ್ದರೆ ಏನಾಗುತ್ತಿತ್ತು ಪರಿಸ್ಥಿತಿ?
ವಿವಿಧ ಲಸಿಕೆ ಅಭಿಯಾನದಿಂದ ಮಕ್ಕಳ ಜೀವ ಉಳಿದಿದೆ. ನಮಗೆ ಬಡವರು, ಮಕ್ಕಳ ಬಗ್ಗೆ ಚಿಂತೆ ಇದೆ. ಅದ್ದರಿಂದ ಮುಂದುವರೆದೆವು.
ಭಾರತದಂತಹ ವಿಶಾಲವಾದ ದೇಶದಲ್ಲಿ ಲಸಿಕೆ ಇರಲಿಲ್ಲ. ಒಂದೊಮ್ಮೆ ಭಾರತದಲ್ಲಿ ಲಸಿಕೆ ತಯಾರಿಸದಿದ್ದರೆ ಭಾರತದ ಪರಿಸ್ಥಿತಿ ಏನಾಗುತ್ತಿತ್ತು ಎಂಬುದನ್ನು ಗಮನಿಸಬೇಕಿದೆ.
ಮೊದಲಿನಂತೆ ಭಾರತವಿರುತ್ತಿದ್ದರೆ ಕನಿಷ್ಠವೆಂದರೂ 10 ವರ್ಷಗಳ ಕಾಲ ಬೇಕಾಗುತ್ತಿತ್ತು. ಮೊದಲು ಅಲ್ಲಿ ಲಸಿಕೆ ಉತ್ಪಾದನೆ ಆಗುತ್ತಿತ್ತು.
ವ್ಯಾಕ್ಸಿನ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸದಿರಿ. ಯುವ ಜನತೆ ವ್ಯಾಕ್ಸಿನ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿ ಎಂದು ಕರೆ ನೀಡಿದ್ದಾರೆ.