ಕೊರೋನಾ ಲಾಕ್ ಡೌನ್ ನಿಂದಾಗಿ ಹಲವು ಬಿಕ್ಕಟ್ಟನ್ನು ಅನುಭವಿಸುವಂತಹ ಸಂದರ್ಭ ಬಂದಿದೆ. ಪ್ರವಾಸಿಗರನ್ನೇ ನೆಚ್ಚಿಕೊಂಡಿದ್ದ ಮೃಗಾಲಯಗಳು ಸಂಕಷ್ಟದ ಸ್ಥಿತಿಯಲ್ಲಿವೆ ಈ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೃಗಾಯವನ್ನು ನಂಬಿ ಜೀವನ ಸಾಗಿಸುತ್ತಿರುವ ಸಿಬ್ಬಂದಿಗಳ ಬದುಕು ಕಷ್ಟಕರವಾಗಿದೆ. ಹಾಗಾಗಿ ಪ್ರಾಣಿ – ಪಕ್ಷಿಗಳನ್ನು ದತ್ತು ಪಡೆಯುವ ಮೂಲ ನೆರವಾಗುವಂತೆ ಕರೆ ನೀಡಿದ್ದರು, ಈ ಮೂಲಕ ಮತ್ತೆ ತಮ್ಮ ಪ್ರಾಣಿ ಪ್ರೀತಿಯನ್ನು ದಚ್ಚು ತೋರಿದ್ದರು. ಇದಕ್ಕೆ ಅಭಿಮಾನಿಗಳು ಹಾಗೂ ಪ್ರಾಣಿ ಪ್ರಿಯರು ರಾಜ್ಯದ ಎಲ್ಲಾ ಮೃಗಾಲಯಗಳಲ್ಲಿಯೂ ದತ್ತು ಪಡೆಯುತ್ತಿದ್ದಾರೆ. ಗಜ ದರ್ಶನ್ ಮನವಿ ಮಾಡಿದ ಎರಡನೇ ದಿನದಲ್ಲಿ 25 ಲಕ್ಷ ಮೌಲ್ಯದ ದತ್ತು ಹಣ ಸಂಗ್ರಹವಾಗಿದೆ ಎಂಬುದನ್ನು ಕರ್ನಾಟಕ ಮೃಗಾಲಯ ಮಾಹಿತಿ ನೀಡಿದೆ.
ಕರ್ನಾಟಕದಲ್ಲಿ ಒಟ್ಟು 9 ಮೃಗಾಲಯಗಳಿವೆ. ಬೆಳಗಾವಿ, ಗದಗ, ಕಲುಬುರ್ಗಿ, ದಾವಣಗೆರೆ, ಹಂಪಿ, ಚಿತ್ರದುರ್ಗ, ಶಿವಮೊಗ್ಗ, ಬನ್ನೇರುಘಟ್ಟ, ಮೈಸೂರಿನಲ್ಲಿ ಮೃಗಾಲಯಗಳಿದ್ದು, ಈ ಎಲ್ಲಾ ಮೃಗಾಲಯಗಳಿಂದಲೂ 25 ಲಕ್ಷ ಮೌಲ್ಯದ ದತ್ತು ಸ್ವೀಕಾರ ಹಾಗೂ ದೇಣಿಗೆ ಸಂಗ್ರಹವಾಗಿದೆ ಎಂದು ಕರ್ನಾಟಕ ಮೃಗಾಲಯ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.