Connect with us

Hi, what are you looking for?

Diksoochi News

ಕರಾವಳಿ

ಸಾಮಾಜಿಕ ಜಾಲತಾಣದಲ್ಲಿ ತುಳು ಧ್ವಜಕ್ಕೆ ಅಪಮಾನ; ಇದನ್ನು ಸಹಿಸಲು ಸಾಧ್ಯವಿಲ್ಲ ಅಂದ್ರು ಅದ್ವಿತಿ ಶೆಟ್ಟಿ

0

ತುಳು ಧ್ವಜಕ್ಕೆ ಅವಮಾನ ಮಾಡುವ ಕೆಲಸವನ್ನು ಸೋಶಿಯಲ್ ಮೀಡಿಯಾದಲ್ಲಿ ಒಬ್ಬ ವ್ಯಕ್ತಿ ಮಾಡಿದ್ದಾರೆ. ತುಳು ಧ್ವಜವನ್ನು ಹೋಲುವಂತೆ ಚಪ್ಪಲಿ ವಿನ್ಯಾಸಗೊಳಿಸಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಇದು ತುಳುವರ ಆಕ್ರೋಶಕ್ಕೆ ಕಾರಣವಾಗಿದೆ.
ಇದೀಗ ತುಳುನಾಡ ಕುವರಿ ನಟಿ ಅದ್ವಿತಿ ಶೆಟ್ಟಿ ತಮ್ಮ ಮಾತೃಭಾಷೆಗೆ ಅವಮಾನ ಮಾಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಈ ಬಗ್ಗೆ ಹಂಚಿಕೊಂಡಿರುವ ಅವರು, ಪ್ರತಿಯೊಂದ ಮಾತೃಭಾಷೆಯನ್ನು ಗೌರವಿಸಬೇಕು. ಅಪಮಾನ ಮಾಡುವಂತಹ ಕೆಲಸ ಮಾಡಬಾರದು ಎಂದಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ. ನನ್ನ ಮಾತೃಭಾಷೆ ತುಳು. ನಾನೊಬ್ಬ ತುಳುವ ಎಂದು ಹೇಳಿಕೊಳ್ಳಲು ನನಗೆ ಹಮ್ಮೆ ಇದೆ. ನಿಜಕ್ಕೂ ಇದು ನೋವು ಉಂಟು ಮಾಡಿದೆ. ನಮ್ಮ ಸುತ್ತಲೂ ಇಂತಹ ವಿಷಯಗಳು ನಡೆಯುತ್ತಿದೆ. ಇಂತಹ ದ್ವೇಷವನ್ನು ಏಕೆ ಹರಡಿಸಬೇಕು, ಏಕೆ ಮಾತನಾಡಬೇಕು ? ಕನ್ನಡ ಭಾಷೆಯನ್ನು ಇಷ್ಟ ಪಡುವಷ್ಟೇ ತುಳು ಭಾಷೆಯನ್ನು ಇಷ್ಟ ಪಡುತ್ತೇನೆ. ದಯವಿಟ್ಟು ಈ ಆರೋಪಿಗಳನ್ನು ಪತ್ತೆ ಹಚ್ಚಿ’ ಎಂದು ವಿನಂತಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!