ದಕ್ಷಿಣ ಆಫ್ರಿಕಾ : ಇಲ್ಲೊಬ್ಬ ಮಹಿಳೆ ಒಂದಲ್ಲ, ಎರಡಲ್ಲ, ಬರೋಬ್ಬರಿ 10 ಮಕ್ಕಳಿಗೆ ಜನ್ಮ ನೀಡಿದ್ದಾರೆ. 37 ವರ್ಷದ ಗೋಸಿಯಮ್ ತಮಾರಾ ಸಿಥೋಲ್ ಎಂಬ ಮಹಿಳೆಯೇ 1ಒ ಮಕ್ಕಳಿಗೆ ಜನ್ಮ ನೀಡಿದವರು. ಏಳು ಗಂಡು ಮಕ್ಕಳು ಹಾಗೂ ಮೂರು ಹೆಣ್ಣು ಮಕ್ಕಳನ್ನು ಸಿಜರಿಯನ್ ಮೂಲಕ ಡೆಲಿವರಿ ಮಾಡಿಸಲಾಗಿದೆ. ಸಿಥೋಲ್ ಅವರಿಗೆ ಈಗಾಗಲೇ ಅವಳಿ ಮಕ್ಕಳಿದ್ದು, ಇದೀಗ 12 ಮಕ್ಕಳ ತಾಯಿಯಾಗಿದ್ದಾರೆ. ಮೊದಲನೇ ಬಾರಿ ಮಕ್ಕಳಿಗೆ ಜನ್ಮ ನೀಡಿದಾಗ ಆಕೆ ಸ್ವೀಕರಿಸಿದ ಚಿಕಿತ್ಸೆಯಿಂದಾಗಿ 10 ಮಕ್ಕಳು ಹುಟ್ಟಿವೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಆಕೆಯ ಪತಿ ಟೆಬೋಗೊ ತ್ಸೊಟೆಟ್ಸಿ ತಿಳಿಸಿದ್ದಾರೆ.
ಈ ಹಿಂದೆ ಮೊರೆಕ್ಕೊದಲ್ಲಿ ಹಲೀಮಾ ಸಿಸ್ಸೆ ಎಂಬ ಮಹಿಳೆ ಒಂಭತ್ತು ಮಕ್ಕಳಿಗೆ ಜನ್ಮ ನೀಡಿದ್ದರು. ಇದೀಗ ಗೋಸಿಯಮ್ ತಮಾರಾ ಸಿಥೋಲ್ 10 ಮಕ್ಕಳಿಗೆ ಜನ್ಮ ನೀಡುವ ಮೂಲಕ ಆ ದಾಖಲೆ ಮುರಿದಿದ್ದಾರೆ.
Advertisement. Scroll to continue reading.