Connect with us

Hi, what are you looking for?

Diksoochi News

ಸಿನಿಮಾ

ಪ್ರಸಿದ್ಧ ಕಂಠದಾನ ಕಲಾವಿದ ಘಂಟಸಾಲ ರತ್ನಕುಮಾರ್ ವಿಧಿವಶ

0

ಭಾರತೀಯ ಚಿತ್ರರಂಗ ಕಂಡ ಮೇರು ಸಂಗೀತ ನಿರ್ದೇಶಕ, ಗಾಯಕ ಘಂಟಸಾಲರ ಪುತ್ರ ಘಂಟಸಾಲ ರತ್ನಕುಮಾರ್ ವಿಧಿವಶರಾಗಿದ್ದಾರೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರು ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಕೊರೋನಾ ಸೋಂಕು ತಗುಲಿ, ಗುಣಮುಖರಾಗಿದ್ದರು ಎಂದು ತಿಳಿದು ಬಂದಿದೆ.

ತಂದೆಯ ಹಾದಿ ಹಿಡಿದಿದ್ದ ರತ್ನಕುಮಾರ್

ರತ್ನ ಕುಮಾರ್ ಘಂಟಸಾಲ ಅವರ ಎರಡನೇ ಪುತ್ರ. ಘಂಟಸಾಲ ಅವರಿಗೆ ಇಬ್ಬರು ಪತ್ನಿಯರು. ಮೊದಲ ಪತ್ನಿಯ ನಿಧನದ ನಂತರ ಎರಡನೇ ವಿವಾಹವಾಗಿದ್ದರು. ಒಟ್ಟು ಎಂಟು ಜನ ಮಕ್ಕಳು. ಅವರಲ್ಲಿ ರತ್ನ ಕುಮಾರ್ ಎರಡನೇಯವರಾಗಿದ್ದು, ತಂದೆಯಂತೆ ಸಿನಿಮಾ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದರು. ತಂದೆಯಂತೆ ಗಾಯಕನಾಗಬೇಕೆಂಬ ಅಭಿಲಾಷೆ ಇತ್ತು. ಕೆಲವು ಹಾಡುಗಳನ್ನೂ ಹಾಡಿದ್ದಾರೆ. ಆದರೆ, ಹೆಚ್ಚಿನ ಬೇಡಿಕೆ ಬಂದಿತ್ತು ಅವರ ಡಬ್ಬಿಂಗ್ ಗೆ.
40 ದಶಕಗಳ ಕಾಲ ಸಿನಿರಂಗದಲ್ಲಿ ಸಾಧನೆ ಮಾಡಿರುವ ಅವರು 1500 ಕ್ಕೂ ಅಧಿಕ ಚಿತ್ರಗಳಿಗೆ ಡಬ್ಬಿಂಗ್ ಕಲಾವಿದನಾಗಿ ಕೆಲಸ ಮಾಡಿದ್ದಾರೆ. ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಅನೇಕ ಭಾಷೆಗಳ ಚಿತ್ರಕ್ಕೆ ಕಂಠದಾನ ಮಾಡಿದ್ದಾರೆ. ಅಲ್ಲದೇ ತಮಿಳು, ತೆಲುಗು ಕಿರುತೆರೆಯಲ್ಲೂ ಸಾಧನೆ ಮೆರೆದಿದ್ದು, 15 ಸಾವಿರ ಎಪಿಸೋಡ್ ಗಳಿಗೆ ಡಬ್ಬಿಂಗ್ ಮಾಡಿದ ಕೀರ್ತಿ ರತ್ನ ಕುಮಾರ್ ರದು.

Advertisement. Scroll to continue reading.

ಎಂಟು ಗಂಟೆಗಳ ಡಬ್ಬಿಂಗ್; ಇಂಡಿಯಾ ಬುಕ್ ಆಫ್ ರೆಕಾರ್ಡ್

ಸತತವಾಗಿ ಎಂಟು ಗಂಟೆಗಳ ಕಾಲ ಡಬ್ಬಿಂಗ್ ಮಾಡಿದ ಅವರ ಹೆಸರು ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸೇರಿದೆ. ಅಲ್ಲದೇ, ಅಮೇಜಿಂಗ್ ಬುಕ್ ಆಫ್ ರೆಕಾರ್ಡ್, ತಮಿಳುನಾಡು ಬುಕ್ ಆಫ್ ರೆಕಾರ್ಡ್, ತಮಿಳುನಾಡು ಬುಕ್ ಆಫ್‍ನ ರೆಕಾರ್ಡ್ ರತ್ನಕುಮಾರ್ ಹೆಸರು ಇದೆ. 12 ಗಂಟೆ ಡಬ್ಬಿಂಗ್ ಮಾಡಿ ದಾಖಲೆ ಮಾಡಬೇಕೆಂಬ ಆಸೆ ಅವರಿಗಿತ್ತು. ಆದರೆ, ವಿಧಿ ಬಾರದ ಲೋಕಕ್ಕೆ ಅವರನ್ನು ಕೊಂಡೊಯ್ದಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!