ಕಾಪು : ಕೊರೊನಾ ಎರಡನೇ ಅಲೆಯ ಸಂಕಷ್ಟ ಪರಿಸ್ಥಿತಿಯಲ್ಲಿ ಸೇವಾ ಮುಂದಾಳು ಫಾರೂಕ್ ಚಂದ್ರನಗರ ಇವರ ನೇತ್ರತ್ವದಲ್ಲಿ ಸಮಾಜ ಸೇವಾ ವೇದಿಕೆ ತಂಡ, ದಾನಿಗಳ ನೆರವಿನಲ್ಲಿ ಸುಮಾರು 5 ಲಕ್ಷ ರೂ.ಮೌಲ್ಯದ ಅಗತ್ಯ ವಸ್ತುಗಳು ಹಾಗು ವೈದ್ಯಕೀಯ ಪರಿಕರವನ್ನು ವಿತರಿಸುವ ಮೂಲಕ ಮಾದರಿಯಾಗಿದೆ.
ನಿರಂತರವಾಗಿ ಕಷ್ಟದಲ್ಲಿದ್ದವರ ಕಣ್ಣೊರೆಸುವ ಕಾರ್ಯದಲ್ಲಿ ತೊಡಗಿರುವ ಈ ಸಂಸ್ಥೆ,ಬಡವರು , ನಿರ್ಗತಿಕರು ಸೇರಿದಂತೆ ಈಗಾಗಲೇ 300 ಕ್ಕೂ ಅಧಿಕ ಆರ್ಹ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳು, ಸುಮಾರು 40 ಸಾವಿರ ವೆಚ್ಚದಲ್ಲಿ ಆರೋಗ್ಯ ಇಲಾಖೆಗೆ ವೈದ್ಯಕೀಯ ಪರಿಕರಗಳು ನೀಡಲಾಗಿದೆ. ಅಲ್ಲದೆ ಕಾಪು ಪೊಲೀಸ್ ವೃತ್ತ ನಿರೀಕ್ಷಕ ಕಚೇರಿಗೆ ತೆರಳಿ 30 ಸಾವಿರ ಮೌಲ್ಯದ ಛತ್ರಿ, ಸ್ಯಾನಿಟೈಸರ್ ಹಾಗು ಮಾಸ್ಕ್ ವಿತರಿಸಲಾಗಿದೆ.
ಈ ಎಲ್ಲಾ ಸಮಾಜ ಮುಖಿ ಕಾರ್ಯದಲ್ಲಿ ವೇದಿಕೆಯ ದಿವಾಕರ ಬಿ ಶೆಟ್ಟಿ ಕಳತ್ತೂರು, ದಿವಾಕರ ಡಿ ಶೆಟ್ಟಿ ಕಳತ್ತೂರು, ಶರ್ಫುದ್ದಿನ್ ಶೇಖ್ ಹಾಗು ಮಜೂರು ಲೋಕೇಶ್ ಭಟ್ ಸಾಥ್ ನೀಡಿರುವುದಾಗಿ ಮುಹಮ್ಮದ್ ಫಾರೂಕ್ ಮಾಹಿತಿ ನೀಡಿದ್ದಾರೆ.
Advertisement. Scroll to continue reading.