Connect with us

Hi, what are you looking for?

Diksoochi News

ಸಿನಿಮಾ

ಬಹುಕಾಲದ ಗೆಳತಿಯ ವರಿಸಿದ ನಟ, ನಿರೂಪಕ ದಾನೀಶ್ ಸೇಠ್

0

ನಟ, ನಿರೂಪಕ ದಾನೀಶ್ ಸೇಠ್ ಬಹುಕಾಲದ ಗೆಳತಿ ಆನ್ಯಾ ರಂಗಸ್ವಾಮಿ ಜೊತೆ ವೈವಾಹಿಕ ಜೀವನಕ್ಕೆ ಪದಾರ್ಪಣೆ ಮಾಡಿಟ್ಟಿದ್ದಾರೆ. ಬುಧವಾರ ರಿಜಿಸ್ಟರ್ ಮ್ಯಾರೇಜ್ ಆಗಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ರಿಜಿಸ್ಟರ್ ಮ್ಯಾರೇಜ್ ಬಳಿಕ ಕುಟುಂಬದ 15 ಜನರ ಸಮ್ಮುಖದಲ್ಲಿ ಅನ್ಯಾ ಮತ್ತು ನಾನು ಉಂಗುರ ಬದಲಾಯಿಸಿಕೊಂಡೆವು. ನಾವು ಪ್ರೀತಿಯಿಂದ ಹೊಸ ಪಯಣ ಪ್ರಾರಂಭಿಸುತ್ತಿದ್ದೇವೆ. ದಯವಿಟ್ಟು ನಮಗೆ ಆಶೀರ್ವಾದ ಮಾಡಿ. ನಿಮ್ಮ ಪ್ರೀತಿಯನ್ನು ಕಳುಹಿಸಿಕೊಡಿ ಎಂದು ಫೋಟೋ ಹಂಚಿಕೊಂಡಿದ್ದಾರೆ.
ಆನ್ಯಾ ರಂಗಸ್ವಾಮಿ ವೃತ್ತಿಯಲ್ಲಿ ಗ್ರಾಫಿಕ್ಸ್ ಡಿಸೈನರ್ ಆಗಿ ನಿರ್ವಹಿಸುತ್ತಿದ್ದು, ಮುಂಬೈನಲ್ಲಿ ಸ್ವತಂತ್ರವಾಗಿ ಕೆಲಸ ಮಾಡಿಕೊಂಡಿದ್ದಾರೆ. ದಾನಿಶ್ ಸೇಠ್ ಹಂಬಲ್ ಪೊಲಿಟಿಶಿಯನ್ ನೋಗರಾಜ್, ಫ್ರೆಂಚ್ ಬಿರಿಯಾನಿ ಚಿತ್ರಗಳಲ್ಲಿ ನಟಿಸಿದ್ದಾರೆ. ರಕ್ಷಿತ್ ಶೆಟ್ಟಿ ನಟನೆ ಚಾರ್ಲಿ 777 ನಲ್ಲೂ ಪಾತ್ರವಾಗಿದ್ದಾರೆ. ಕ್ರಿಕೆಟ್ ಕುರಿತು ಹಲವು ಕಾರ್ಯಕ್ರಮಗಳ ನಿರೂಪಣೆ ಮಾಡಿರುವ ಅವರು, ಹಿಂದಿ ವೆಬ್ ಸಿರೀಸ್ ನಲ್ಲೂ ನಟಿಸಿದ್ದು, ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!