ಬ್ರಹ್ಮಾವರ : ಕೊರೋನ ವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಬಾರಕೂರು ಪರಿಸರದಲ್ಲಿ ಸಂಕಷ್ಟದಲ್ಲಿರುವ 70 ವಿಕಲಚೇತನರನ್ನು ಗುರುತಿಸಿ ಕಾರ್ಪೋರೇಶನ್ ಬ್ಯಾಂಕ್ ಎಂಪ್ಲಾಯಿಸ್ ಯೂನಿಯನ್ ವತಿಯಿಂದ ದಿನ ಬಳಕೆಯ ಆಹಾರ ಸಾಮಗ್ರಿಗಳನ್ನು ಬಾರಕೂರು ಗ್ರಾಮ ಪಂಚಾಯತಿಯಲ್ಲಿ ಶುಕ್ರವಾರ ಗ್ರಾಮ ಪಂಚಾಯತಿ ಅಧ್ಯಕ್ಷ ಬಾರಕೂರು ಶಾಂತಾರಾಮ ಶೆಟ್ಟಿ ವಿತರಿಸಿದರು.

ಬಳಿಕ ಮಾತನಾಡಿದ ಅವರು, ಬಹತೇಕ ಜನರು ಸಂಕಷ್ಟದಲ್ಲಿರುವಾಗ ವಿಕಲಚೇತನರನ್ನು ಗುರುತಿಸಿ ಅವರಿಗೆ ನೀಡಲಾದ ಆಹಾರದ ಕಿಟ್ ವಿತರಣೆ ಕಾರ್ಯ ಮಾದರಿಯಾಗಿದೆ. ವೈದ್ಯರ ಶಿಪಾರಸ್ಸಿನ ಮೇಲೆ ಸರಕಾರ ವಿಕಲಚೇತನರೆಂದು ಗುರುತಿಸಿದೆ. ಆದರೆ ಇನ್ನಿತರ ಕಡೆಯಲ್ಲಿ ಆಹಾರದ ಕಿಟ್ ವಿತರಿಸುವಾಗ ಬಡವರನ್ನು ಗುರುತಿಸುವುದು ಕಷ್ಟವಾಗಿ ನೈಜ ಬಡವರಿಗೆ ಸಿಗದಿರುವಂತಾಗಿದೆ ಎಂದರು.

ಸಂಘದ ಉಪಾಧ್ಯಕ್ಷ ಕಾಮ್ರೆಡ್ ರಘುರಾಮ ಕೃಷ್ಣ ಬಲ್ಲಾಳ್, ಕಾರ್ಯದರ್ಶಿ ಹೇರಾಲ್ಡ್ ಡಿ’ಸೋಜ, ನಾಗೇಶ್ ನಾಯಕ್ ಗ್ರಾಮಪಂಚಾಯತಿ ಅಭಿವೃದ್ಧಿ ಅಧಿಕಾರಿ ವಂದನಾ, ಮಾಜಿ ಗ್ರಾಮಪಂಚಾಯತಿ ಅಧ್ಯಕ್ಷೆ ಶೈಲಾ ಡಿ’ಸೋಜ, ಮನೋಜ್ ಕುಮಾರ್, ರಮೇಶ್ ಇನ್ನಿತರರು ಉಪಸ್ಥಿತರಿದ್ದರು
