ಅದಮಾರು : ಚಿನ್ನದ ಗಟ್ಟಿ ಹಾಗೆ ಇದ್ದರೆ ಅದು ಭೂಷಣವಾಗುವುದಿಲ್ಲ. ಅದನ್ನು ಆಭರಣ ಮಾಡಿದರೆ ಅದು ಶೋಭಾಯಮಾನವಾಗುತ್ತದೆ. ಹಾಗೆಯೇ ಎಷ್ಟು ಕಲಿತ ವ್ಯಕ್ತಿಗಳು ಶಿಕ್ಷಕ ವೃತ್ತಿಯನ್ನು ಹೊಂದಿದ್ದರೂ, ಶಾಲೆಗೆ ಹೋಗಿ ಪಾಠಮಾಡಿ ವಿದ್ಯಾರ್ಥಿಗಳಿಂದಲೇ ಮೆಚ್ಚುಗೆ ಗಳಿಸಿದಾಗ ಅವರು ಆಭರಣದಂತೆ ಶೋಭಿಸುತ್ತಾರೆ ಎಂದು ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಶ್ರೀ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು 2021- 22 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್ ಮಾತನಾಡಿ, ಕೊರೋನ ತೊಂದರೆ ಇದ್ದರೂ ಮಕ್ಕಳಿಗೆ ಪಾಠ ಪ್ರವಚನಗಳು ಆನ್ ಲೈನ್ ಮೂಲಕವಾದರೂ ಸಿಗುವಂತಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕೋಶಾಧಿಕಾರಿ ಪ್ರವೀಣ್ ಕುಮಾರ್, ಉಪಪ್ರಾಂಶುಪಾಲೆ ಡಾ. ಒಲ್ವಿಟಾ ಡಿ’ಸೋಜ, ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸಂಧ್ಯಾ ಮಹೇಶ್, ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ನಿಶ್ಮಿತಾ ಶೆಟ್ಟಿ ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಾಂಶುಪಾಲ ಎಂ.ರಾಮಕೃಷ್ಣ ಪೈ ಸ್ವಾಗತಿಸಿದರು. ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶ್ರೀಕಾಂತ್ ರಾವ್ ವಂದಿಸಿದರು. ಸಂಸ್ಕøತ ಉಪನ್ಯಾಸಕ ಡಾ.ಜಯ ಶಂಕರ್ ಕಂಗಣ್ಣಾರು ಕಾರ್ಯಕ್ರಮ ನಿರ್ವಹಿಸಿದರು.

