ಕಾಪು: ಯುಪಿಎ ಸರ್ಕಾರದ ಅವಧಿಯಲ್ಲಿ ಪೈಸೆಯ ಬೆಲೆ ಏರಿಕೆಯಾದಾಗ ಗರಿ ಗರಿ ಸೀರೆ ಹಾಕಿಕೊಂಡು ರಸ್ತೆಗಿಳಿದ ಸಂಸದೆ ಶೋಭಾ ಕರಂದ್ಲಾಜೆ ಎಲ್ಲಿ ಹೋಗಿದ್ದಾರೆ? ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಪ್ರಶ್ನಿಸಿದ್ದಾರೆ.
ಡೀಸೆಲ್ ಪೆಟ್ರೋಲ್ ದರ ಏರಿಕೆ ಖಂಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾಪು ಪೆಟ್ರೋಲ್ ಬಂಕ್ ಮುಂಭಾಗ ನಡೆದ ಪ್ರತಿಭಟನೆ ವೇಳೆ ಅವರು ಮಾತನಾಡಿದರು. “ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೋವಿಡ್ ಸಮಯದಲ್ಲಿ ಯಾವ ಮುಲಾಜಿಯಿಲ್ಲದೆ ಪೆಟ್ರೋಲ್, ಡೀಸೆಲ್, ಗ್ಯಾಸ್, ವಿದ್ಯುತ್ ದರ ಏರಿಸುವ ಮುಖಾಂತರ ಗಾಯದ ಮೇಲೆ ಬರೆ ಹಾಕುವ ಕೆಲಸ ಮಾಡುತ್ತಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆಶೋಕ್ ಕುಮಾರ್ ಕೊಡವೂರು ಮಾತನಾಡಿ, “ಸರ್ಕಾರ ಕೇವಲ ಪೆಟ್ರೋಲ್ ಡೀಸೆಲ್ ದರ ಏರಿಸದೆ ದಿನಂಪ್ರತಿ ಬಳಸುವ ಎಲ್ಲಾ ಸಾಮಾಗ್ರಿಗಳ ದರ ಏರಿಸುವ ಮುಖಾಂತರ ಜನರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮೋಸ ಮಾಡುತ್ತಿದೆ ಎಂದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಕೆಪಿಸಿಸಿ ಮುಖಂಡರಾದ ಎಂ.ಎ. ಗಫೂರ್, ನವೀನ್ ಚಂದ್ರ ಶೆಟ್ಟಿ, ಮಹಮ್ಮದ್ ಫಾರೂಖ್, ಪಕ್ಷದ ಮುಖಂಡರಾದ ಗೀತಾ ವಾಗ್ಲೆ, ಪ್ರಶಾಂತ್ ಜತ್ತನ್ನ, ರಮೀಜ್ ಹುಸೇನ್, ಶರ್ಫುದ್ದೀನ್ ಶೇಖ್, ವೈ. ಸುಧೀರ್ ಕುಮಾರ್, ಯು.ಸಿ. ಶೇಖಬ್ಬ, ಮಹಮ್ಮದ್ ಸಾಧಿಕ್ ದೀನಾರ್, ನವೀನ್ ಎನ್. ಶೆಟ್ಟಿ, ಶಶಿಧರ್ ಶೆಟ್ಟಿ, ಶೇಖರ್ ಕೋಟ್ಯಾನ್, ಅಬ್ದುಲ್ ಅಜೀಜ್, ಶಿವಾಜಿ ಸುವರ್ಣ, ಕೇಶವ ಹೆಜಮಾಡಿ, ಹಸನಬ್ಬ ಶೇಖ್, ಹರೀಶ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.