Connect with us

Hi, what are you looking for?

Diksoochi News

ಕರಾವಳಿ

ಹೆಬ್ರಿ : ಶಿವಪುರದಲ್ಲಿ ಮಳೆಯಿಂದ ಅಪಾರ ಹಾನಿ; ಜಿಲ್ಲಾಧಿಕಾರಿ ಜಿ.ಜಗದೀಶ್ ಭೇಟಿ, ಪರಿಶೀಲನೆ

0

ವರದಿ : ಶ್ರೀದತ್ತ ಹೆಬ್ರಿ

ಹೆಬ್ರಿ : ತಾಲೂಕಿನ ಶಿವಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ದೇವಸ್ಥಾನಬೆಟ್ಟು ಬೋರುಗುಡ್ಡೆ ಎಂಬಲ್ಲಿ ಮುಂಗಾರು ಗಾಳಿ, ಮಳೆಗೆ ಶ್ರೀನಿವಾಸ್ ಎಂಬುವವರ ಮನೆಯ ಮೇಲೆ ಆಕೇಶಿಯಾ ಮರ ಬಿದ್ದು ಹಾನಿಯಾಗಿದ್ದು ಸುಮಾರು 50 ಸಾವಿರ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಸೋಮವಾರ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಸ್ಥಳಕ್ಕೆ ಆಗಮಿಸಿ ಭೇಟಿ ನೀಡಿ ಪರಿಶೀಲಿಸಿದರು. ಪ್ರಕೃತಿ ವಿಕೋಪದಡಿಯಲ್ಲಿ ಸರಕಾರದಿಂದ ಪರಿಹಾರ ದೊರಕಿಸಿ ಕೊಡುವುದಾಗಿ ಭರವಸೆ ನೀಡಿದರು. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

Advertisement. Scroll to continue reading.


ಈ ಸಂದರ್ಭದಲ್ಲಿ ಹೆಬ್ರಿ ತಹಸೀಲ್ದಾರ್ ಪುರಂದರ್ ಕೆ, ಕಂದಾಯ ನಿರೀಕ್ಷಕ ಹಿತೇಶ್, ತಾಲೂಕು ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ರಮೇಶ್ ಪೂಜಾರಿ, ಶಿವಪುರ ಗ್ರಾಮ ಪಂಚಾಯಿತಿನ ಮಾಜಿ ಅಧ್ಯಕ್ಷ ಸುರೇಶ್ ಶೆಟ್ಟಿ ಶಿವಪುರ ಹಾಗೂ ಗ್ರಾಮ ಸಹಾಯಕರು ಮತ್ತಿತರರು ಉಪಸ್ಥಿತರಿದ್ದರು .

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!