ಕಾಪು: ಲಾಕ್-ಡೌನ್ ರಿಲೀಫ್ ಆಗುತಿದ್ದಂತೆ ಕಾಪು ತಹಶೀಲ್ದಾರ್ ಪ್ರತಿಭಾ ಅಕ್ರಮ ದಂಧೆಕೋರರ ಬೇಟೆಗೆ ಇಳಿದಿದ್ದಾರೆ. ಕಾಪು ತಾಲೂಕಿನ ಎರ್ಮಾಳು ಎಂಬಲ್ಲಿ ಅಕ್ರಮವಾಗಿ ಸುಮಾರು 800 ಮೆಟ್ರಿಕ್ ಟನ್ ಸಿಲಿಕಾನ್ ಆಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ತಹಶೀಲ್ದಾರ್ ಮತ್ತು ತಂಡ ದಾಳಿ ನಡೆಸಿ ಎಲ್ಲಾ ಮರಳನ್ನು ಸೀಜ್ ಮಾಡಿದ್ದಾರೆ.
ಮರಳು ಸಂಗ್ರಹಿಸಲಾದ ಜಾಗ ತೆಂಕ ಗ್ರಾಮದ ಅಶೋಕ್ ರಾಜ್ ಎಂಬವರಿಗೆ ಸೇರಿದ್ದು, ಗಿರೀಶ್ ಎಂಬ ವ್ಯಕ್ತಿ ಮರಳು ರಾಶಿ ಹಾಕಿರುವುದಾಗಿ ತಿಳಿದು ಬಂದಿದೆ. ಈ ಸಂಬಂಧ ಮರಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರ ವಶಕ್ಕೆ ನೀಡಿ ಮಹಜರು ಮಾಡಿಸಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಂದಾಯ ಅಧಿಕಾರಿ, ಕಾಪು ತಾಲೂಕು ಗಣಿ ಅಧಿಕಾರಿ, ಗ್ರಾಮ ಕಾರಣಿಕ ಉಪಸ್ಥಿತರಿದ್ದರು.
Advertisement. Scroll to continue reading.