ಸದ್ಯಕ್ಕೆ ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆಯದೇ ಸುದ್ದಿ. ಈ ನಡುವೆ ರಾಜ್ಯ ಬಿಜೆಪಿ ಉಸ್ತುವಾರಿ ಸಚಿವ ಅರುಣ್ ಸಿಂಗ್ ಮೂರು ದಿನಗಳ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಇಂದು ಸಂಜೆ ಅವರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಬಳಿಕ ಇಂದು ಬಿಜೆಪಿಯ ಸಭೆ ನಡೆಸಲಿದ್ದಾರೆ. ಇದು ರಾಜ್ಯ ನಾಯಕತ್ವದಲ್ಲಿ ಬದಲಾವಣೆ ಆಗುತ್ತಾ? ಎಂಬ ಪ್ರಶ್ನೆ ಮತ್ತೆ ಗಟ್ಟಿಯಾಗುವಲ್ಲಿ ಪುಷ್ಟಿ ನೀಡುತ್ತಿದೆ. ದೆಹಲಿಯಿಂದ ಹೊರಟಿರುವ ಅರುಣ್ ಸಿಂಗ್ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ್ದು, ಮೂರು ದಿನಗಳ ಕರ್ನಾಟಕ ಪ್ರವಾಸ ಕೈಗೊಂಡಿದ್ದೇನೆ. ಏನೂ ಹೇಳ್ಬೇಕೋ ಕರ್ನಾಟಕದಲ್ಲೇ ಹೇಳ್ತೀನಿ ಎಂದು ಹೇಳಿದ್ದಾರೆ. ಇದಕ್ಕೂ ಮೊದಲು ಜೆ.ಪಿ.ನಡ್ಡಾ ಜೊತೆಗೂ ಅವರು ಸುದೀರ್ಘ ಸಭೆ ನಡೆಸಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.