Connect with us

Hi, what are you looking for?

Diksoochi News

ಕರಾವಳಿ

ಸಂಕಷ್ಟದಲ್ಲಿದ್ದವರಿಗೆ ನೇರವಾಗುತ್ತಿದೆ `ನಮ್ಮೂರು ಬಾರ್ಕೂರು’ ಫೇಸ್ ಬುಕ್ ಗ್ರೂಪ್

0

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ಕೊರೋನಾ ಸಂಕಷ್ಟದ ಈ ಸಂದರ್ಭದಲ್ಲಿ ಹಲವು ಜೀವಗಳು ನೆರವಿನ ಹಸ್ತ ಚಾಚುತ್ತಿವೆ. ಹಲವಾರು ಸಂಘ-ಸಂಸ್ಥೆಗಳು ಬಡವರ ಕಷ್ಟಕ್ಕೆ ಮಿಡಿಯುತ್ತಿವೆ. ಈ ನಡುವೆ ಫೇಸ್ಬುಕ್ ಮೂಲಕ ಬಾರ್ಕೂರಿನ ತಂಡ ಮಾನವೀಯತೆ ಮೆರೆಯುತ್ತಿದೆ. `ನಮ್ಮೂರು ಬಾರ್ಕೂರು’ ಫೇಸ್ ಬುಕ್ ಪೇಜ್ ಮೂಲಕ ಕಳೆದ ಬಾರಿ 650 ಕ್ಕೂ ಹೆಚ್ಚಿನ ಮನೆಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಿತ್ತು ತಂಡ. ಈ ಬಾರಿಯೂ
ಗ್ರೂಪಿನಲ್ಲಿ ಇರುವ ದಾನಿಗಳ ನೆರವಿನಿಂದ ಸುಮಾರು ಎರಡು ಲಕ್ಷ ರೂಪಾಯಿಗಳನ್ನು ಬಾರಕೂರು ಪರಿಸರದಲ್ಲಿ ಸಂಕಷ್ಟದಲ್ಲಿರುವ ಸುಮಾರು 50 ಕುಟುಂಬಗಳಿಗೆ ತಲಾ ರೂ. 4000 ದಂತೆ ವಿತರಿಸಲಾಗಿದೆ. ಆಲ್ವಿನ್ ಅಂದ್ರಾದೆ, ಗಣೇಶ್ ಶೆಟ್ಟಿ, ಆನಂದ್ ಕುಮಾರ್ , ಹರೀಶ್ ಆಚಾರ್ಯ , ಸವಿತಾ ಫುಟಾರ್ದೋ, ಹೇಮಂತ್ ಶ್ರೀಯಾನ್ , ಉದಯ್ ಪೂಜಾರಿ ಬಾರಕೂರು ಇವರೆಲ್ಲರೂ ಸೇರಿ ಈ ಒಂದು ಕಾರ್ಯಕ್ರಮ ಸಂಘಟಿಸುವುದರೊಂದಿಗೆ ಮನೆಗಳಿಗೆ ತೆರಳಿ ಧನಸಹಾಯ ವಿತರಿಸಿದ್ದಾರೆ.

ಪ್ರಚಾರವಿಲ್ಲ…ಫೋಟೋ ಗುಂಗಿಲ್ಲ

Advertisement. Scroll to continue reading.

'ನಮ್ಮೂರು ಬಾರ್ಕೂರು' ಫೇಸ್ಬುಕ್ ಗ್ರೂಪ್ ಕಾರ್ಯ ನಿರ್ವಾಹಕರ ಮನವಿಗೆ ಸ್ಪಂದಿಸಿ ಸಕಾಲದಲ್ಲಿ ದಾನಿಗಳು ಸ್ಪಂದಿಸುತ್ತಿರುವುದರಿಂದ ಸಮಾಜಿಕ ಕಾರ್ಯ ಮೆರೆಯುವಲ್ಲಿ ಈ ಗ್ರೂಪ್ ಸಫಲವಾಗುತ್ತಿದೆ. ಮತ್ತೊಂದು ಗಮನಾರ್ಹ ಸಂಗತಿ ಎಂದರೆ ಈ ಗ್ರೂಪ್ ಗೆ ಫೋಟೋದ ಗುಂಗಿಲ್ಲ..ಪ್ರಚಾರ ಬೇಕಿಲ್ಲ..ನಿಸ್ವಾರ್ಥ ಸೇವೆಯಷ್ಟೇ ಇವರ ಕಾಯಕ. ನೇರವಾಗಿ ಹೋಗಿ ಸಂಕಷ್ಟದಲ್ಲಿರುವವರ ಮನೆ ಬಾಗಿಲಿನ ಕದ ತಟ್ಟಿ ನೆರವಾಗುತ್ತಿದೆ ಈ ತಂಡ. ಇವರ ಕಾರ್ಯ ಹೀಗೆ ಮುಂದುವರೆಯಲಿ...ಇತರರಿಗೂ ಸ್ಪೂರ್ತಿಯಾಗಲಿ ಎಂಬುದು 'ದಿಕ್ಸೂಚಿ ನ್ಯೂಸ್’ ಆಶಯ.

Click to comment

Leave a Reply

Your email address will not be published. Required fields are marked *

You May Also Like

ಅಂತಾರಾಷ್ಟ್ರೀಯ

0 ನವದೆಹಲಿ : ಫೇಸ್ ಬುಕ್ ಗೆಳೆಯನಿಗಾಗಿ ಪಾಕಿಸ್ತಾನಕ್ಕೆ ಹೋಗಿ ವಿವಾಹವಾಗಿದ್ದ ಅಂಜು ಇದೀಗ ಭಾರತಕ್ಕೆ ಮರಳಿದ್ದಾರೆ. ಖೈಬರ್ ಪಖ್ತುಂಖ್ವಾದಲ್ಲಿ ತನ್ನ ಪತಿ ಪಾಕಿಸ್ತಾನದ ಪ್ರಜೆ ನಸ್ರುಲ್ಲಾ ಅವರೊಂದಿಗೆ ವಾಸಿಸುತ್ತಿರುವ 34 ವರ್ಷದ...

ಜ್ಯೋತಿಷ್ಯ

0 ದಿನಾಂಕ : ೩೦-೧೧-೨೩, ವಾರ : ಗುರುವಾರ, ತಿಥಿ: ತದಿಗೆ, ನಕ್ಷತ್ರ: ಆರಿದ್ರಾ ನೀವು ಇತರರಿಗೆ ಸಹಾಯ ಮಾಡಿ ಮೆಚ್ಚುಗೆ ಪಡೆಯುತ್ತೀರಿ. ವ್ಯಾಪಾರದಲ್ಲಿ ಹೊಸ ಪಾಲುದಾರರನ್ನು ಸಿಗುತ್ತಾರೆ. ಆದಾಯದ ಮೂಲಗಳು ಹೆಚ್ಚಾಗಬಹುದು....

ಸಿನಿಮಾ

1 ಬಿಗ್ ಬಾಸ್ ಸೀಸನ್ 10ನಲ್ಲಿಜಗಳ, ಪರಸ್ಪರ ಕಿತ್ತಾಟ ಕಂಡುಬರುತ್ತಿದೆ. ಈ ಬಾರಿ ವಿನಯ್ ಹಾಗೂ ಸ್ನೇಹಿತ್ ಸಂಗಡ ಬಿಟ್ಟು ನಮ್ರತಾ ಗೌಡ ಡ್ರೋನ್ ಪ್ರತಾಪ್ ತಂಡ ಸೇರಿದ್ದರು. ಆದರೆ, ಕ್ಯಾಪ್ಟನ್ ಟಾಸ್ಕ್‍ನಲ್ಲಿ...

ರಾಜ್ಯ

2 ಬೆಂಗಳೂರು: ಯಾವುದನ್ನೂ ಉಚಿತವಾಗಿ ನೀಡಬಾರದು. ಸರ್ಕಾರದಿಂದ ಒದಗಿಸುವ ಸೇವೆಗಳು ಮತ್ತು ಸಬ್ಸಿಡಿಗಳಿಗೆ ಖಂಡಿತಾ ನನ್ನ ವಿರೋಧವಿಲ್ಲ, ಆದರೆ ಅದನ್ನು ಉಚಿತವಾಗಿ ಪಡೆದುಕೊಂಡವರು ಸಮಾಜಕ್ಕೆ ಉಪಕಾರವಾಗುವಂತೆ ಕೆಲಸ ಮಾಡಿ ಹಿಂತಿರುಗಿ ಕೊಡಬೇಕು. ಆಗ...

ಜ್ಯೋತಿಷ್ಯ

0 ದಿನಾಂಕ : ೨೯-೧೧-೨೩, ವಾರ : ಬುಧವಾರ, ತಿಥಿ: ಬಿದಿಗೆ, ನಕ್ಷತ್ರ: ಮೃಗಶಿರಾ ನೀವು ಇಂದು ನಿಮ್ಮ ಸಂಗಾತಿಗೆ ಕೆಲವು ಉಡುಗೊರೆಗಳನ್ನು ನೀಡಬಹುದು. ವ್ಯಾಪಾರದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಹಣ ಬರಲಿದೆ. ಸಹೋದರ...

error: Content is protected !!