ಉಡುಪಿ : ಕೋವಿಡ್ ಸೋಂಕು ನಿಯಂತ್ರಿಸುವ ಸಲುವಾಗಿ ಸರ್ಕಾರ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ. ಅದರಲ್ಲಿ ವೀಕೆಂಡ್ ಕರ್ಫ್ಯೂ ಕೂಡಾ ಒಂದು. ಈ ಬಗ್ಗೆ ಉಡುಪಿ ಡಿಸಿ ಜಿ.ಜಗದೀಶ್ ಮಾಹಿತಿ ನೀಡಿದ್ದು, ಶುಕ್ರವಾರ ಸಂಜೆ ಏಳರಿಂದ ಸೋಮವಾರ ಬೆಳಿಗ್ಗೆ 5 ಗಂಟೆಯ ವರೆಗೆ ಜಾರಿಯಲ್ಲಿರುತ್ತದೆ. ಕೆಲವೊಂದು ಚಟುವಟಿಕೆಗಳಿಗೆ ಮಾತ್ರ ಅವಕಾಶ ಇರಲಿದೆ. ಉಲ್ಲಂಘಿಸಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಏನಿರಲಿದೆ? ಏನಿಲ್ಲ?
ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಅವಕಾಶ.
ಹೋಂ ಡೆಲಿವರಿ, ಹೊಟೇಲ್ ಪಾರ್ಸೆಲ್ ಅವಕಾಶ.
ರೋಗಿಗಳಿಗೆ, ಪರಿಚಾರಕರಿಗೆ ಅವಕಾಶ.
ದೂರವಾಣಿ ಸೇವೆ, ಇಂಟರ್ನೆಟ್ ಸಂಸ್ಥೆಗಳಿಗೆ ಓಡಾಡಲು ಅವಕಾಶ.
ಅಗತ್ಯ ವಸ್ತುಗಳ ಸರಬರಾಜಿಗೆ ಅವಕಾಶ.
ದೂರದೂರಿನಿಂದ ರೈಲು, ವಿಮಾನದ ಮೂಲಕ ಬಂದವರಿಗೆ ಮನೆಗೆ ಹೋಗಲು ಅವಕಾಶ.
ಪೂರ್ವ ನಿಗದಿಯಾದ ಮದುವೆಗಳಿಗೆ, 40 ಮಂದಿಗೆ ಅವಕಾಶ.
ಅಂತ್ಯಸಂಸ್ಕಾರಕ್ಕೆ 5 ಮಂದಿಗೆ ಅವಕಾಶ.
ಇದರ ಹೊರತಾಗಿ ಮತ್ತೆಲ್ಲಾ ಚಟುವಟಿಗೆಗಳಿಗೆ ಅವಕಾಶವಿಲ್ಲ.
ಈಗಾಗಲೇ ಅವಕಾಶ ಕೊಟ್ಟಿರುವ ಫ್ಯಾಕ್ಟರಿಗಳೂ ಎರಡು ದಿನ ಬಂದ್.

