ಉಡುಪಿ : ಕೋವಿಡ್ ನಿಯಂತ್ರಣಕ್ಕೆ ಲಸಿಕೆ ಪಡೆಯುವದಿಂದ ಮಾತ್ರವೇ ಪರಿಣಾಮಕಾರಿಯಾಗಿದ್ದು, ಸಾರ್ವಜನಿಕರು ಯಾವುದೇ ಅಪಪ್ರಚಾರಗಳಿಗೆ ಕಿವಿಗೊಡದೇ ಸರ್ಕಾರದಿಂದ ನೀಡುವ ಉಚಿತ ಕೋವಿಡ್ ಲಸಿಕೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆಯುವಂತೆ ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಅವರು ಇಂದು ಪುತ್ತೂರಿನ ಹನುಮಂತನಗರ ಶಾಲೆಯಲ್ಲಿ ಆಯೋಜಿಸಿದ್ದ ಕೋವಿಡ್ 19 ಲಸಿಕಾ ಮಹಾಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದು ಇಡೀ ವಿಶ್ವದಲ್ಲೇ ಅತ್ಯಂತ ದೊಡ್ಡ ಕೋವಿಡ್ ಲಸಿಕಾ ಅಭಿಯಾವನ್ನು ದೇಶದಾದ್ಯಂತ ಹಮ್ಮಿಕೊಳ್ಳಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಇದುವರೆಗೆ 337095 ಮಂದಿ ಪ್ರಥಮ ಡೋಸ್ ಲಸಿಕೆಯನ್ನು ಪಡೆದಿದ್ದು ಶೇ.25 ಸಾಧನೆ ಆಗಿದೆ, 95477 ಮಂದಿ ಎರಡನೇ ಡೋಶ್ ಪಡೆದು 7% ಸಾಧನೆ ಮಾಡಲಾಗಿದೆ. ಲಸಿಕಾ ಅಭಿಯಾನದ ಇಂದು 30000 ಡೋಸ್ ಕೋವಿಡ್ ಲಸಿಕೆ ನೀಡಲಿದ್ದು, ಒಟ್ಟು ಜಿಲ್ಲೆಯಲ್ಲಿ ಪ್ರಥಮ ಡೋಸ್ 367000 ಮಂದಿಗೆ ನೀಡುವ ಮೂಲಕ ನ ಶೇ.30 ಸಾಧನೆ ಆಗಲಿದೆ, 3 ನೇ ಅಲೆಯ ವೇಳೆಗೆ ಜಿಲ್ಲೆಯಲ್ಲಿ 70 % ರಿಂರ 80% ದ ವರೆಗೆ ಪ್ರಥಮ ಡೋಸ್ ನೀಡುವ ಗುರಿ ಹೊಂದಲಾಗಿದೆ.
ಈ ಹಿಂದೆ ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯ ಲಸಿಕೆ ಸರಬರಾಜು ಆಗಿದ್ದರೂ ಸಹ, ಲಸಿಕೆ ಕುರಿತು ಅಪಪ್ರಚಾರದಿಂದ ಲಸಿಕೆ ಪಡೆಯುವವರ ಸಂಖ್ಯೆ ಕಡಿಮೆಯಾಗಿದ್ದು, ನಂತರದಲ್ಲಿ ಲಸಿಕೆ ವ್ಯರ್ಥವಾಗಬಾರದು ಎಂಬ ಉದ್ದೇಶದಿಂದ ಜಿಲ್ಲೆಗೆ ಕಡಿಮೆ ಲಸಿಕೆ ಸರಬರಾಜು ಮಾಡಿದ್ದರಿಂದ ಲಸಿಕೆಯ ಕೊರತೆ ಉಂಟಾಗಿತ್ತು. ಆದರೆ ಪ್ರಸ್ತುತ ಸಾರ್ವಜನಿಕರು ಲಸಿಕೆಯ ಕುರಿತು ಅಪಪ್ರಚಾರಕ್ಕೆ ಕಿವಿಗೊಡದೇ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆಯಲು ಮುಂದೆ ಬಂದಿರುವುದರಿಂದ ಸರ್ಕಾರದಿಂದ ಹೆಚ್ಚಿನ ಸಂಖ್ಯೆಯ ಲಸಿಕೆ ದೊರೆಯಲಿದೆ, ಕೋವಿಡ್ ಲಸಿಕೆ ಪಡೆದ ಯಾವುದೇ ವ್ಯಕ್ತಿ ಕೋವಿಡ್ ಭಾದಿಸಿದದರೂ ಸಹ ಅದರ ತೀವ್ರತೆಗ ಒಳಗಾಗದೆ ಗುಣಮುಖರಾಗಿದ್ದಾರೆ ಯಾರೂ ಸಹ ವೆಂಟಿಲೇಟರ್ ಪಡೆಯುವ ಮಟ್ಟಿಗೆ ಭಾಧಿತರಾಗದೇ ಔಷಧಗಳಿಂದಲೇ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು , ಅದ್ದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಲಸಿಕೆ ಪಡೆದು ಇತರರನ್ನೂ ಲಸಿಕೆ ಪಡೆಯಲು ಪ್ರೇರೇಪಿಸುವಂತೆ ಶೋಭಾ ಕರಂದ್ಲಾಜೆ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ರಘುಪತಿಭಟ್ ಮಾತನಾಡಿ, ಕೋವಿಡ್ ನಿಯಂತ್ರಣಕ್ಕೆ ಲಾಕ್ ಡೌನ್ ಪರಿಹಾರವಲ್ಲ ಲಸಿಕೆಯಿಂದ ಮಾತ್ರ ಪರಿಹಾರ ಸಾಧ್ಯ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆಯಬೇಕು. ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ 5.04% ಇದೆ ಆದ್ದರಿಂದ ಜಿಲ್ಲೆಯನ್ನೂ ಸಹ ಸಂಪೂರ್ಣ ಅನ್‍ಲಾಕ್ ಮಾಡುವ ಕುರಿತಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಮಂಜು ಕೊಳ, ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲಾ ಪಂಚಾಯತ್ ಸಿಇಓ ಡಾ.ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹಾಗೂ ನಗರಸಭೆಯ ವಿವಿಧ ಸದಸ್ಯರು ಉಪಸ್ಥಿತರಿದ್ದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ಸ್ವಾಗತಿಸಿದರು, ಲಸಿಕಾ ಉಸ್ತುವಾರಿ ಡಾ. ಎಂ.ಜಿ.ರಾಮ ವಂದಿಸಿದರು. ಸುಮಾರು 300 ಕ್ಕೂ ಅಧಿಕ ಮಂದಿಗೆ ಈ ಕೇಂದ್ರದಲ್ಲಿ ಲಸಿಕೆ ನೀಡಲಾಯಿತು.