Connect with us

Hi, what are you looking for?

Diksoochi News

ಕರಾವಳಿ

ಹೆಜಮಾಡಿ: ಆಕಸ್ಮಿಕವಾಗಿ ಅಪ್ಪಳಿಸಿದ ಅಲೆ; ಸಮುದ್ರದಲ್ಲಿ ಮುಳುಗಿ ಮೀನುಗಾರ ಮೃತ್ಯು

0

ಹೆಜಮಾಡಿ: ಸಾಂಪ್ರದಾಯಿಕ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಹೆಜಮಾಡಿ ಅಳಿವೆ ಬಾಗಿಲಿನಲ್ಲಿ ನಡೆದಿದೆ. ಹೆಜಮಾಡಿ ಕೋಡಿ ಮಾನಂಪಾಡಿಯ ಜಯಂತ ಶ್ರೀಯಾನ್ (45) ಮೃತಪಟ್ಟವರಾಗಿದ್ದು,ಇವರು ಮಂಗಳವಾರ ಮುಂಜಾನೆ ಅಳಿವೆ ಬಾಗಿಳಿಗೆ ಮೀನು ಹಿಡಿಯಲು ಹೋಗಿದ್ದರು.ಈ ವೇಳೆ ಆಕಸ್ಮಿಕವಾಗಿ ಅಪ್ಪಳಿಸಿದ ಅಲೆ ಹೊಡೆತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.
ಮೃತರು ಪತ್ನಿ ಹಾಗೂ 4 ಮಕ್ಕಳನ್ನು ಅಗಲಿದ್ದಾರೆ. ಸ್ಥಳಕ್ಕೆ ಪಡುಬಿದ್ರಿ ಎಸೈ ದಿಲೀಪ್, ಹೆಜಮಾಡಿ ಗ್ರಾಪಂ ಅಧ್ಯಕ್ಷ ಪ್ರಾಣೇಶ್ ಹೆಜಮಾಡಿ, ಸದಸ್ಯ ಶರಣ್ ಕುಮಾರ್ ಮಟ್ಟು ಮತ್ತಿತರರು ಭೇಟಿ ನೀಡಿದ್ದಾರೆ. ಮೃತ ದೇಹವನ್ನು ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!