Connect with us

Hi, what are you looking for?

Diksoochi News

ರಾಷ್ಟ್ರೀಯ

ಮನ್ ಕಿ ಬಾತ್ ನಲ್ಲಿ ಮಿಲ್ಖಾ ಸಿಂಗ್ ಸ್ಮರಣೆ; ಒಲಂಪಿಕ್ಸ್ ಗೆ `ಚಿಯರ್ ಫಾರ್ ಇಂಡಿಯಾ’ ಘೋಷ ವಾಕ್ಯ ಹೇಳಿದ ಪ್ರಧಾನಿ ಮೋದಿ

0

ನವದೆಹಲಿ : ಮಿಲ್ಖಾ ಸಿಂಗ್ ಸಾಧನೆ ಮರೆಯಲು ಸಾಧ್ಯವಿಲ್ಲ. ಕೊರೋನಾ ಮಿಲ್ಖಾ ಸಿಂಗ್ ಅವರನ್ನು ನಮ್ಮಿಂದ ಕಸಿದುಕೊಂಡಿದೆ. ಅವರು ಕ್ರೀಡಾಪಟುಗಳಿಗೆ ಸ್ಪೂರ್ತಿಯಾಗಿದ್ದರು. 2014ರಲ್ಲಿ ಅವರು ಸೂರತ್ ಗ ಬಂದಿದ್ದರು. ರಾತ್ರಿ ಮ್ಯಾರಾಥಾನ್ ಗೆ ಒಟ್ಟಿಗೆ ಚಾಲನೆ ನೀಡಿದ್ದೆವು ಎಂದು `ಮನ್ ಕಿ ಬಾತ್’ನಲ್ಲಿ ಮಿಲ್ಖಾ ಸಿಂಗ್ ಸಾಧನೆಯನ್ನು ಸ್ಮರಿಸಿದ್ದಾರೆ. 78 ನೇ ಮನ್ ಕಿ ಬಾತ್ ನಲ್ಲಿ ಮಾತನಾಡುತ್ತಿದ್ದ ಅವರು, ಈ ಬಾರಿ ಟೋಕಿಯೋದಲ್ಲಿ ಒಲಂಪಿಕ್ಸ್ ನಡೆಯಲಿದೆ. ನಮ್ಮ ದೇಶದಲ್ಲಿ ಚಿಕ್ಕ – ಚಿಕ್ಕ ಪಟ್ಟಣದಿಂದ, ಗ್ರಾಮಗಳಿಂದ ಕ್ರೀಡಾಪಡುಗಳು ಟೋಕಿಯೋ ಒಲಂಪಿಕ್ಸ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದರು. ಮಹಿಳಾ ಹಾಕಿ ತಂಡ ಸದಸ್ಯೆ ನೇಹಾ ಘೋಯೆಲ್ ಬಗ್ಗೆ ಮಾತನಾಡಿದ ಮೋದಿ, ನೇಹಾ ತಾಯಿ, ಸಹೋದರಿ ಸೈಕಲ್ ಫ್ಯಾಕ್ಟರ್ ಯಲ್ಲಿ ಕೆಲಸ ಮಾಡಿ ಕುಟುಂಬವನ್ನು ಸಾಕುತ್ತಿದ್ದಾರೆ ಎಂದರು.

ಟೋಕಿಯೋ ಒಲಂಪಿಕ್ಸ್ ಪಾಲ್ಕೊಳ್ಳುವ ನಮ್ಮ ಕ್ರೀಡಾಪಟುಗಳು ಬಾಲ್ಯದಿಂದಲೂ ಸಾಕಷ್ಟು ಕಷ್ಟಗಳನ್ನು ಅನುಭವಿಸಿದವರು. ನಾವು ಎಷ್ಟು ಎತ್ತರಕ್ಕೆ ಏರಿದರೂ ಹಿಂದಿನ ದಿನಗಳನ್ನು ಮರೆಯಬಾರದು ಎಂದರು.
ನಾವೆಲ್ಲರೂ ಎಲ್ಲಾ ಟ್ವಿಟ್ಟರ್ ನಲ್ಲಿ `ಚಿಯರ್ ಫಾರ್ ಇಂಡಿಯಾ’ ಹ್ಯಾಷ್ ಟ್ಯಾಗ್ ಮೂಲಕ ಟೋಕಿಯೋ ಒಲಂಪಿಕ್ಸ್ ನಲ್ಲಿ ಪಾಲ್ಗೊಳ್ಳುವ ಎಲ್ಲಾ ಕ್ರೀಡಾಪಟುಗಳಿಗೆ ಶುಭ ಹಾರೈಸೋಣ ಎಂದು ಪ್ರಧಾನಿ ಮೋದಿ ಕರೆ ಕೊಟ್ಟರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!