ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಪುತ್ರಿ ಐಶ್ವರ್ಯಾ ಕ್ರಿಕೆಟ್ ಆಟಗಾರ ರೋಹಿತ್ ದಾಮೋದರನ್ ಜೊತೆ ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದ್ದಾರೆ. ಮಹಾಬಲಿಪುರಂನಲ್ಲಿ ಕುಟುಂಬದ ಕೆಲವೇ ಸದಸ್ಯರ ಸಮ್ಮುಖದಲ್ಲಿ ಮದುವೆ ನಡೆದಿದೆ.
ಐಶ್ವರ್ಯಾ ನಿರ್ದೇಶಕ ಶಂಕರ್ ಮತ್ತು ಪತ್ನಿ ಈಶ್ವರಿ ದಂಪತಿಯ ಹಿರಿಯ ಮಗಳಾಗಿದ್ದು, ಡಾಕ್ಟರ್ ಆಗಿ ಕೆಲ ಮಾಡುತ್ತಿದ್ದಾರೆ. ರೋಹಿತ್ ರಣಜಿ ಕ್ರಿಕೆಟರ್. ಪಾಂಡಿಚೇರಿ ತಂಡದ ಕ್ಯಾಪ್ಟನ್. ರೋಹಿತ್ ತಂದೆ ದಾಮೋದರನ್ ದೊಡ್ಡ ಉದ್ಯಮಿಯಾಗಿದ್ದು, ತಮಿಳು ನಾಡು ಪ್ರೀಮಿಯರ್ ಲೀಗ್ ನ ಮಧುರೈ ಪ್ಯಾಂಥರ್ಸ್ ತಂಡದ ಮಾಲಿಕರಾಗಿದ್ದಾರೆ. ಐಶ್ವರ್ಯಾ – ರೋಹಿತ್ ಮದುವೆ ಫೋಟೋ ವೈರಲ್ ಆಗಿದ್ದು, ಅಭಿಮಾನಿಗಳು ಶುಭಕೋರಿದ್ದಾರೆ.
ಪ್ಯಾನ್ ಇಂಡಿಯಾ 3ಡಿ ಸಿನಿಮಾ ಮಾಡಲಿರುವ ಶಂಕರ್
ಶಂಕರ್ ತಮಿಳಿನ ಹಲವು ಸ್ಟಾರ್ ನಟರಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸೂಪರ್ ಹಿಟ್ ಚಿತ್ರಗಳನ್ನು ನೀಡಿರೋ ಶಂಕರ್ ರಾಮ್ ಚರಣ್ ತೇಜ್ ಜೊತೆ ಪ್ಯಾನ್ ಇಂಡಿಯಾ 3ಡಿ ಸಿನಿಮಾ ಅನೌನ್ಸ್ ಮಾಡಿದ್ದಾರೆ. ರಣ್ವೀರ್ ಸಿಂಗ್ ಜೊತೆ ಅನ್ನಿಯನ್ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡಲಿದ್ದಾರೆ. ಕಮಲ್ ಹಾಸನ್ ಜೊತೆ `ಇಂಡಿಯನ್ 2′ ಸಿನಿಮಾ ಪೂರ್ಣಗೊಳಿಸಬೇಕಿದೆ.