ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಯಕ್ಷ ಧ್ರುವ ಪಟ್ಲ ಪೌಂಡೇಶನ್ ವತಿಯಿಂದ ಯಕ್ಷಗಾನ ಕಲಾವಿದರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣಾ ಸಮಾರಂಭ ಮಂಗಳವಾರ ಬ್ರಹ್ಮಾವರ ಭಂಟರ ಭವದಲ್ಲಿ ಜರುಗಿತು. ಸಮಾರಂಭಕ್ಕೆ ಅಸಗಮಿಸಿದ ಸಚಿವ ಕೋಟ ಶ್ರೀ ನಿವಾಸ ಪೂಜಾರಿ ಮಾತನಾಡಿ ಯಕ್ಷಗಾನ ಕಲಾವಿದರನ್ನು ಗುರುತಿಸಿ ಅವರ ನೋವು ನಲಿವಿಗೆ ಸಂದಿಸುವ ಯಕ್ಷದ್ರುವ ಪಟ್ಲ ಪೌಂಡೇಶನ ಸರಕಾರ ಮಾಡುವ ಕೆಲಸಕ್ಕೆ ಸಹಕಾರಿಯಾಗಿದೆ ಕೋರೊನ ಸಂಕಷ್ಟದ ಇಂದಿನ ದಿನದಲ್ಲಿ ಕಲಾವಿದರಿಗೆ ಆಹಾರ ಸಾಮಗ್ರಿ ನೀಡಿ ಮಾದರಿ ಕೆಲಸ ಮಾಡಿದೆ ಎಂದರು. ಬಹುತೇಕ ಬಡಗುತಿಟ್ಟಿನ 100 ಕಲಾವಿದರಿಗೆ ಸಾಮಗ್ರಿ ನೀಡಲಾಯಿತು.ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಎಂ.ಎಲ್ ಸಾಮಗ.ಬಂಟರ ಸಂಘದ ಮಾಜಿ ಅಧ್ಯಕ್ಚ ಬಿ.ಭುಜಂಗ ಶೆಟ್ಟಿ. ಯಕ್ಷ ದ್ರುವ ಕೇಂದ್ರ ಸಮಿತಿಯ ಉದಯ ಶೆಟ್ಟಿ ಕೆರೆಕಟ್ಟೆ.ವಸಂತ ಗಿಳಿಯಾರ.ಡಾ.ವಿಟ್ಲ ಹರೀಶ್ ಜೋಷಿ.ಯಕ್ಷಗಾನ ಸಂಘಟಕ ಸುಧಾಕರ ಆಚಾರ್ಯ ಉಡುಪಿ.ಹರೀಶ್ ಶೆಟ್ಟಿ ಚೇರಕಾಡಿ ಇನ್ನಿತರು ಉಪಸ್ಥಿತರಿದ್ದರು.
Advertisement. Scroll to continue reading.