ವರದಿ : ದಿನೇಶ್ ರಾಯಪ್ಪನ ಮಠ
ಕುಂದಾಪುರ: ಕೋಡಿ ಗ್ರಾಮದಲ್ಲಿ ೪೭೧ ಹಕ್ಕುಪತ್ರಗಳಲ್ಲಿ ೨೧ ಹಕ್ಕು ಪತ್ರ ಕೊಡಲಾಗಿದೆ. ಉಳಿದ ಹಕ್ಕು ಪತ್ರಗಳಿಗೆ ಸಿ.ಆರ್.ಝಡ್ ಅನುಮತಿ ಪಡೆದು ನೀಡಲು ಚರ್ಚೆ ನಡೆಸಲಾಗಿದೆ ಎಂದು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.
ಕೋಡಿ ಕನ್ಯಾನದಲ್ಲಿ ನಡೆದ ವಿಶೇಷ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕರೋನಾದಿಂದಾಗಿ ದೇಗುಲಗಳಿಗೆ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು. ಜೂಲೈ ೦೫ ರ ನಂತರ ಎಲ್ಲವೂ ಸರಿಯಾಗುವ ನಿರೀಕ್ಷೆ ಇದೆ.
ದೇಗುಲಗಳನ್ನು ಯಾವ ರೀತಿ ಭಕ್ತರಿಗೆ ಪ್ರವೇಶ ನೀಡಬೇಕು. ಪೂಜೆಗಳನ್ನು ಯಾವ ರೀತಿ ನಡೆಸಬೇಕು ಎಂದು ಚರ್ಚಿಸಲಾಗುತ್ತಿದೆ ಎಂದು ನುಡಿದರು.
ದೈವ ಪರಿಚಾರಕರನ್ನು ಕಲಾವಿದರ ಪಟ್ಟಿಗೆ ಸೇರಿಸಲಾಗಿದೆ. ಆದರೆ ಯಕ್ಷಗಾನ ಕಲಾವಿದರನ್ನು ಯಾವ ವ್ಯಾಪ್ತಿಗು ಸೇರಿಸಿಲ್ಲ. ಅದರ ಬಗ್ಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭ ಕೋಡಿ-ಕನ್ಯಾಣ ಪಂಚಾಯತ್ ಅಧ್ಯಕ್ಷ ಪ್ರಭಾಕರ್ ಕುಂದರ್,ಪಂಚಾಯತ್ ಸದಸ್ಯ ಕೃಪ್ಣ ಪೂಜಾರಿ,ಕೆ,ಎಫ್, ಡಿ,ಸಿ ನಿರ್ದೇಶಕ ಸಂದೀಪ್ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.