ವರದಿ: ಬಿ. ಎಸ್. ಆಚಾರ್ಯ
ಬಿಲ್ಲಾಡಿ : ಬಿಲ್ಲಾಡಿ ಗ್ರಾಮ ಪಂಚಾಯತ್ ಪ್ರಧಾನಮಂತ್ರಿ ಸುರಕ್ಷಾ ಹಾಗೂ ಜೀವನ್ ಜ್ಯೋತಿ ಬಿಮಾ ಯೋಜನೆಯ ಅಭಿಯಾನಕ್ಕೆ ಗ್ರಾಮಪಂಚಾಯತ್ ಅದ್ಯಕ್ಷೆ ಕುಮಾರಿ ರತ್ನಾ ಚಾಲನೆ ನೀಡಿದರು ಗ್ರಾಮಸ್ಥರು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುವರೇ ಗ್ರಾಮಪಂಚಾಯತ್ ವ್ಯಾಪ್ತಿಯ 10 ಅಂಗನವಾಡಿ ಕೇಂದ್ರಗಳಲ್ಲಿ ಬಿಮಾಯೋಜನೆಯ ಬಗ್ಗೆ ಜನರಿಗೆ ಮಾಹಿತಿ ನೀಡುವ ಕಾರ್ಯಕ್ರಮ ಮಾಡುವರೇ ನಿರ್ಣಯ ಕೈಗೊಳ್ಳಲಾಯಿತು ಈ ಸಂದರ್ಭದಲ್ಲಿ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ, ಸದಸ್ಯರಾದ ಪ್ರಥ್ವೀರಾಜ್ ಶೆಟ್ಟಿ , ಅರುಣ್ ಶೆಟ್ಟಿ,ವೆಂಕಪ್ಪ ಕುಲಾಲ್ ,ರವಿ ಆಚಾರ್,ಪಿಡಿಒ ಪ್ರಶಾಂತ್ , ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಸಂಜೀವಿನಿ ಯೋಜನೆಯ ಪ್ರತಿನಿಧಿಗಳು ಮತ್ತು ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು. ಆವರ್ಸೆ ಕೆನರಾ ಬ್ಯಾಂಕ್ ಅಧಿಕಾರಿ ಶ್ರೀ ಅಲೆಕ್ಸ್ ಕ್ಲಿಟಸ್ ಯೋಜನೆ ಯ ಬಗ್ಗೆ ಮಾಹಿತಿ ನೀಡಿದರು
Advertisement. Scroll to continue reading.
