ಹಾರಾಡಿ ಗ್ರಾಮ ಪಂಚಾಯತಿ ವತಿಯಿಂದ ವಿಮಾ ಸೌಲಭ್ಯ ಸಪ್ತಾಹ : ಹೊನ್ನಾಳ ಉರ್ದು ಶಾಲೆಯಲ್ಲಿ ಜರುಗಿತು
Published
0
ವರದಿ : ಬಿ. ಎಸ್. ಆಚಾರ್ಯ
ಹಾರಾಡಿ: ಹಾರಾಡಿ ಗ್ರಾಮ ಪಂಚಾಯತಿ ವತಿಯಿಂದ ವಿಮಾ ಸೌಲಭ್ಯ ಸಪ್ತಾಹ ಕಾರ್ಯಕ್ರಮ ಹೊನ್ನಾಳ ಉರ್ದು ಶಾಲೆಯಲ್ಲಿ ಜರುಗಿತು ಕೆನರಾ ಬ್ಯಾಂಕ್ ಮೇನೆಜರ್ ಬ್ಲೋಸಮ್ ಡಿ,ಸೋಜ ಮಾತನಾಡಿ ಪ್ರತಿಯೊಬ್ಬರು ರಾಷ್ಟ್ರೀಕೃತ ಬ್ಯಾಂಕಿ ನಲ್ಲಿ ಖಾತೆ ಹೊಂದಿದವರು ಅತೀ ಚಿಕ್ಕ ಮೊತ್ತಕ್ಕೆ ಅತೀ ಹೆಚ್ಚು ಮೊತ್ತ ದೊರಕುವ ಪ್ರಧಾನ ಮಂತ್ರಿ ಜೀವನ್ ಭಿಮಾ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ಯಾಗಿದೆ . ಕೇವಲ 12 ರೂ ಮತ್ತು 330 ರೂಪಾಯಿಗೆ ಸಹಜ ಸಾವು ಮತ್ತು ಕೋರೋನ ದಿಂದ ಮೃತರಾದವರೀಗೆ ಕೂಡಾ ರೂ 2ಲಕ್ಷ ದೊರಕಲಿದೆ ಎಂದರು . ಹಾರಾಡಿ ಗ್ರಾಮಮಪಂಚಾಯತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ , ಅಭಿವೃದ್ಧಿ ಅಧಿಕಾರಿ ಆದರ್ಶ ಶೆಟ್ಟಿ ಉಪಸ್ಥಿತರಿದ್ದರು.