ಬಾಲಿವುಡ್ ಚಲನಚಿತ್ರ ನಿರ್ದೇಶಕ, ನಿರ್ಮಾಪಕ ರಾಜ್ ಕೌಶಲ್ (50) ಹೃದಯಾಘಾತದಿಂದ ಇಂದು ಬೆಳಗ್ಗೆ 4.30ಕ್ಕೆ ನಿಧನರಾಗಿದ್ದಾರೆ. ರಾಜ್ ಕೌಶಲ್ ನಿಧನಕ್ಕೆ ಚಿತ್ರರಂಗದ ಹಲವರು ಸಂತಾಪ ಸೂಚಿಸಿದ್ದಾರೆ.
90 ಮತ್ತು 2000 ದಶಕದಲ್ಲಿ ಹೆಚ್ಚು ಸಕ್ರಿಯರಾಗಿ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದ ರಾಜ್ ಕೌಶಲ್, ‘ಪ್ಯಾರ್ ಮೇ ಕಭಿ ಕಭಿ’ (1999) ಮತ್ತು ‘ಶಾದಿ ಕಾ ಲಡ್ಡೂ'(2004) ಎಂಬ ಚಿತ್ರಗಳನ್ನು ನಿರ್ದೇಶಿಸಿ ನಿರ್ಮಿಸಿದ್ದರು. ಇವರ ನಿರ್ದೇಶನದ ಕೊನೆಯ ಸಿನಿಮಾ ‘ಆಂಥೋನಿ ಕೌನ್ ಹೈ’ 2006 ರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ಅರ್ಷದ್ ವಾರ್ಸಿ ಮತ್ತು ಸಂಜಯ್ ದತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.
ಇವರು ಬಾಲಿವುಡ್ ನ ಖ್ಯಾತ ನಟಿ ಮಂದಿರ ಬೇಡಿ ಅವರನ್ನು 1999ರ ಫೆಬ್ರವರಿ 14 ರಂದು ವಿವಾಹವಾದರು. ಕೌಶಲ್ ಮತ್ತು ಮಂದಿರಾ ದಂಪತಿಗೆ ಯುಗ್ ಮತ್ತು ತಾರಾ ಎಂಬ ಇಬ್ಬರು ಮಕ್ಕಳು. ಈ ಎರಡು ಮಕ್ಕಳನ್ನು 2020ರಲ್ಲಿ ದತ್ತು ತೆಗೆದುಕೊಂಡಿದ್ದರು.
Advertisement. Scroll to continue reading.