ಉತ್ತರ ಕನ್ನಡ : ದಾಂಡೇಲಿಯ ಕೋಗಿಲಬನ ಗ್ರಾಮದಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ ಗೊಂಡಿದ್ದು ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು.ಸುಮಾರು ಅರ್ಧ ಘಂಟೆಗೂ ಅಧಿಕ ಕಾಲ ಗ್ರಾಮದ ರಸ್ತೆಗಳಲ್ಲಿ ತಿರುಗಾಡಿದ ಮೊಸಳೆ ಗ್ರಾಮದ ಜನರಲ್ಲಿ ಆತಂಕ ಮೂಡಿಸಿತ್ತು. ಊರಿನ ಕಾಳಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಮೊಸಳೆಯು ಗ್ರಾಮಕ್ಕೆ ಆಗಮಿಸಿದೆ ಎಂದು ತಿಳಿದು ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗ ಮೊಸಳೆಯನ್ನು ಸೆರೆಹಿಡಿದಿದ್ದಾರೆ. ಬಳಿಕ ಮತ್ತೆ ಮೊಸಳೆಯನ್ನು ನದಿಗೆ ಬಿಟ್ಟಿದ್ದಾರೆ.