ಬೆಂಗಳೂರು : ದೇವಸ್ಥಾನಗಳಲ್ಲಿ ದೇವರ ದರ್ಶನ, ಮಾಲ್ ಗಳನ್ನು ತೆರೆಯಲು ಅವಕಾಶ ನೀಡಿ ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ. ಕೋವಿಡ್ ಉಸ್ತುವಾರಿಗಳೊಂದಿಗಿನ ಮಹತ್ವದ ಸಭೆಯ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ದೇವಸ್ಥಾನಗಳಲ್ಲಿ ಪ್ರಸಾದ ವಿತರಣೆ, ಹೋಮ ಹವನಕ್ಕೆ ಅವಕಾಶವಿಲ್ಲ. ಜು. 5 ರಿಂದ 19 ರ ವರೆಗೆ ಮಾತ್ರ ಈ ಮಾರ್ಗಸೂಚಿ ಅನ್ವಯ . ನೈಟ್ ಕರ್ಫ್ಯೂ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5 ಗಂಟೆಯ ವರೆಗೆ ಇರಲಿದೆ. ವಾರಾಂತ್ಯ ಕರ್ಫ್ಯೂ ಇಲ್ಲ ಎಂದು ಅವರು ಹೇಳಿದ್ದಾರೆ
ಏನಿರಲಿದೆ?
ಕೊರೋನಾ ನಿಯಮಾನುಸಾರ ಮಾಲ್ ಗಳನ್ನು ತೆರೆಯಲು ಅವಕಾಶ.
ರಾತ್ರಿ 11 ಗಂಟೆಯ ವರೆಗೆ ಸಂಚರಿಸಲು ಅವಕಾಶ.
ಸರ್ಕಾರ, ಖಾಸಗಿ ಕಂಪೆನಿಗಳಲ್ಲಿ 100% ದಷ್ಟು ಸಿಬ್ಬಂದಿಯೊಂದಿಗೆ ಅವಕಾಶ. ಕೈಗಾರಿಕೆಗಳಿಗೂ ಅವಕಾಶ.(100%)
ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕಷ್ಟೇ ಅವಕಾಶ.
ಮೆಟ್ರೋ, ಬಸ್ ಸಂಚಾರ. (ಶೇಕಡಾ 100)
ಹೋಟೆಲ್ ಗಳಿಗೆ ಅವಕಾಶ.(100%)
ಬಾರ್ ಗಳಿಗೂ ಅವಕಾಶ.(ರಾತ್ರಿ 9 ಗಂಟೆಯವರೆಗೆ) ಈಜುಕೊಳಗಳಿಗೆ ಕ್ರೀಡಾ ಪಟುಗಳಿಗೆ ಮಾತ್ರ ಅವಕಾಶ. ಮದುವೆಗೆ 100 ಮಂದಿಗೆ ಅವಕಾಶ. ಅಂತ್ಯಸಂಸ್ಕಾರಕ್ಕೆ 20 ಮಂದಿಗೆ ಅವಕಾಶ. ವಾರಾಂತ್ಯ ಕರ್ಫ್ಯೂ ಇಲ್ಲ. ನೈಟ್ ಕರ್ಫ್ಯೂ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5 ಗಂಟೆಯ ವರೆಗೆ
ಏನಿಲ್ಲ?
ಥಿಯೇಟರ್, ಮಲ್ಟಿಫ್ಲೆಕ್ಸ್ ಗಳಿಗೆ ಅವಕಾಶವಿಲ್ಲ. ಪ್ರತಿಭಟನೆ ಅವಕಾಶ ಇಲ್ಲ. ಪಬ್, ಕ್ಲಬ್ ಗಳಿಗೆ ಅವಕಾಶ ಇಲ್ಲ. ಶಾಲೆ, ಕಾಲೇಜುಗಳಿಗೆ ಅವಕಾಶವಿಲ್ಲ. ಈ ಬಗ್ಗೆ ಚರ್ಚಿಸಿ ಮುಂದಿನವಾರ ನಿರ್ಧಾರ.
ಸಿಎಂ ಎಚ್ಚರಿಕೆ
ಕೋವಿಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ. ಇಲ್ಲವಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.