Connect with us

Hi, what are you looking for?

Diksoochi News

ಕರಾವಳಿ

ಹೆಬ್ರಿಯ ವಿವಿದೆಡೆ ಕಾಂಗ್ರೆಸ್‌ ನಾಯಕ ಗೋಪಾಲ ಭಂಡಾರಿ ಸ್ಮರಣೆ

0

ವರದಿ : ಶ್ರೀದತ್ತ ಹೆಬ್ರಿ

ಹೆಬ್ರಿ : ನಮ್ಮ ನಾಯಕರಾಗಿದ್ದ ಗೋಪಾಲ ಭಂಡಾರಿಯವರ ವ್ಯಕ್ತಿತ್ವವೇ ನಮಗೆಲ್ಲ ದೊಡ್ಡ ಶಕ್ತಿ, ಅವರು ನಮ್ಮೊಂದಿಗೆಯೇ ಇದ್ದಾರೆ ಎಂಬ ಭಾವನೆ ಮೂಡುತ್ತಿದೆ. ಈಗ ಕಾರ್ಕಳ ಕ್ಷೇತ್ರದಲ್ಲಿ ನಾವು ಮತ್ತೇ ಹಂತ ಹಂತವಾಗಿ ಕಾಂಗ್ರೆಸ್‌ ಪಕ್ಷವನ್ನು ಬಲಪಡಿಸುವ ಮೂಲಕ ಅವರ ಕನಸು ಈಡೇರಿಸಬೇಕಿದೆ ಎಂದು ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಹೇಳಿದರು.
ಅವರು ಹೆಬ್ರಿ ಕಾಂಗ್ರೆಸ್‌ ಸಮಿತಿ ವತಿಯಿಂದ ಅಧ್ಯಕ್ಷ ಎಚ್.ಬಿ.ಸುರೇಶ್‌ ನೇತ್ರತ್ವದಲ್ಲಿ ನಡೆದ ದ್ವಿತೀಯ ವರ್ಷದ ಪುಣ್ಯಸ್ಮರಣೆ ಭಾಗವಹಿಸಿ ಮಾತನಾಡಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಮಾತನಾಡಿ ಗೋಪಾಲ ಭಂಡಾರಿ ನಾಡಿಗೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು.


ಶ್ವೇತ ಕುಮಾರ್‌, ಬ್ಲಾಕ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಎಚ್.‌ ಜನಾರ್ಧನ್‌, ಕಾರ್ಯದರ್ಶಿ ಅಶ್ವಿನಿ ಮುದ್ರಾಡಿ,ಹೆಬ್ರಿ ಗ್ರಾಮ ಪಂಚಾಯಿತಿ ಸದಸ್ಯರಾದ ಕೃಷ್ಣ ನಾಯ್ಕ್‌, ಸಂತೋಷ ನಾಯಕ್‌ ಕನ್ಯಾನ, ಪಕ್ಷದ ವಿವಿಧ ಪ್ರಮುಖರಾದ ಶಶಿಕಲಾ ಡಿ.ಪೂಜಾರಿ, ಜಯಲಕ್ಷ್ಮಿ ಮುದ್ರಾಡಿ, ನಾಗರಾಜ ಭಂಡಾರಿ, ಸುಂದರ ಶಿರೂರ್‌, ಶಶಿಕಲಾ ಆರ್‌ ಪಿ, ಸುಧಾಕರ ಶೆಟ್ಟಿ ಬಲ್ಲೆಮನೆ, ದೇವಳಬೈಲು ಸುಧಾಕರ ಶೆಟ್ಟಿ, ಅಮರನಾಥ ಶೆಟ್ಟಿ, ಸುಂದರ ಪೂಜಾರಿ, ಗಣೇಶ್‌ ಶೇರಿಗಾರ್‌, ಶಂಕರ ಶೇರಿಗಾರ್‌, ರಾಜೇಶ ಪೂಜಾರಿ, ವಿಶು ಕುಮಾರ್‌, ಕರವೇ ಹೆಬ್ರಿ ಘಟಕದ ಅಧ್ಯಕ್ಷ ಸೀತಾನದಿ ವಿಜೇಂದ್ರ ಶೆಟ್ಟಿ, ಜೆಡಿಎಸ್‌ ಕಾರ್ಕಳ ಕ್ಷೇತ್ರಾಧ್ಯಕ್ಷ ಕುಚ್ಚೂರು ಶ್ರೀಕಾಂತ್‌ ಪೂಜಾರಿ,ಹೆಬ್ರಿ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಎಚ್.ಬಿ.ಸುರೇಶ್‌ ಮತ್ತಿತರರು ಉಪಸ್ಥಿತರಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ಅರೆ ಹೌದಾ!

1 ನವದೆಹಲಿ: ಮೆಟ್ರೋ ರೈಲಿನಲ್ಲಿ ಬಿಕಿನಿ, ಅಶ್ಲೀಲ ಕೃತ್ಯಗಳಿಂದ ಕುಖ್ಯಾತವಾಗಿದ್ದ ದೆಹಲಿಯಲ್ಲಿ ಇದೀಗ ಮಹಿಳೆಯೊಬ್ಬರು ಬಿಕಿನಿ ತೊಟ್ಟು ಬಸ್‌ ಹತ್ತಿದ್ದು ಆಕೆಯ ವೇಷವನ್ನು ನೋಡಲಾಗದೆ ಸಹ ಪ್ರಯಾಣಿಕರು ಸೀಟು ಬಿಟ್ಟು ಹೋದ ಘಟನೆ ನಡೆದಿದೆ....

ರಾಷ್ಟ್ರೀಯ

0 ನವದೆಹಲಿ: ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದ ವೇಳೆ ನಿಗದಿತ ಮತಕ್ಕಿಂತ ಹೆಚ್ಚುವರಿ ಮತ ಬಿಜೆಪಿಗೆ ಬಿದ್ದಿರುವ ಹಿನ್ನಲೆ, ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಭಾರತೀಯ ಚುನಾವಣಾ ಆಯೋಗಕ್ಕೆ ಆದೇಶಿಸಿದೆ. ಹಿರಿಯ ವಕೀಲ...

ರಾಜ್ಯ

1 ಹುಬ್ಬಳ್ಳಿ : ಕಾರ್ಪೋರೇಟರ್ ನಿರಂಜನ್ ಹಿರೇಮಠ ಎಂಬವರ ಮಗಳನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ನಡೆದಿದೆ.ನೇಹಾ ಹಿರೇಮಠ ಹತ್ಯೆಯಾದ ವಿದ್ಯಾರ್ಥಿನಿ. ಕಾಲೇಜ್ ಕ್ಯಾಂಪಸ್ ನಲ್ಲಿರುವ ಕ್ಯಾಂಟೀನ್ ನಲ್ಲಿ...

ರಾಷ್ಟ್ರೀಯ

0 ನವದೆಹಲಿ: ಅಬಕಾರಿ ಪ್ರಕರಣದಲ್ಲಿ ಜೈಲುಪಾಲಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಶತಾಯಗತಾಯ ಜಾಮೀನು ಪಡೆಯಲು ಜೈಲಲ್ಲಿ ಮಾವು, ಸಿಹಿ ತಿನಿಸುಗಳನ್ನು ತಿನ್ನುವ ಮೂಲಕ ಬೇಕಂತಲೇ ‘ಶುಗರ್’ ಹೆಚ್ಚಿಸಿಕೊಳ್ಳಲು ಯತ್ನಿಸಿದ್ದಾರೆ ಎಂದು ಜಾರಿ...

ರಾಜ್ಯ

0 ಮಂಡ್ಯ: ಐಸ್ ಕ್ರೀಮ್ ಸೇವನೆ ಮಾಡಿದ ಬಳಿಕ ಅವಳಿ ಮಕ್ಕಳು ಸಾವನ್ನಪ್ಪಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ. ಗ್ರಾಮದ ಪ್ರಸನ್ನ ಮತ್ತು ಪೂಜಾ ದಂಪತಿಯ ಒಂದೂವರೆ ವರ್ಷದ ತ್ರಿಶೂಲ್...

error: Content is protected !!