Connect with us

Hi, what are you looking for?

Diksoochi News

Uncategorized

ಬೆಂಗಳೂರು : ಬಲೂನ್ ಗೆ ಗ್ಯಾಸ್ ತುಂಬಿಸುವ ವೇಳೆ ಸ್ಪೋಟ; ವ್ಯಕ್ತಿ ಸಾವು

0

ಬೆಂಗಳೂರು : ಬರ್ತ್ ಡೇ ಆಚರಿಸುವುದಕ್ಕಾಗಿ ಬಲೂನ್ ಗಳಿಗೆ ತುಂಬಿಸುತ್ತಿದ್ದ ಗ್ಯಾಸ್ ಸ್ಫೋಟಗೊಂಡು ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ದಿನೇಶ್ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.

ಅಪಾರ್ಟ್ ಮೆಂಟ್ ಒಂದರಲ್ಲಿ ನಡೆಯಲಿದ್ದ ಹುಟ್ಟು ಹಬ್ಬಕ್ಕೆ ಬಲೂನ್ ಗೆ ಗ್ಯಾಸ್ ತುಂಬಿಸುವ ವೇಳೆ ಗ್ಯಾಸ್ ಸ್ಫೋಟ ಗೊಂಡಿದ್ದು ಸ್ಥಳದಲ್ಲೇ ದಿನೇಶ್ ಪ್ರಾಣ ಬಿಟ್ಟಿದ್ದಾನೆ.

ಈತ ಸಭೆ ಸಮಾರಂಭ ಹಾಗೂ ಹುಟ್ಟುಹಬ್ಬ ಮತ್ತು ಕಳೆದ ನಾಲ್ಕು ವರ್ಷಗಳಿಂದ ವಿವಿಧ ಕಾರ್ಯಕ್ರಮಗಳಿಗೆ ಗ್ಯಾಸ್ ತುಂಬಿಸಿದ ಬಲೂನ್ ಗಳನ್ನು ಮಾರಾಟ ಮಾಡುವ ಕೆಲಸ ಮಾಡುತ್ತಿದ್ದ. ಭಾನುವಾರ ತನ್ನ ಸಹಚರ ಮಹದೇಶ್ ಜೊತೆ ಅಪಾರ್ಟ್ಮೆಂಟ್ ಗೆ ತೆರೆಳಿದ್ದಾನೆ. ತಾವು ಬೈಕ್ ನಿಲ್ಲಿಸುತ್ತಿದ್ದ ಸ್ಥಳದಲ್ಲೇ ಇಬ್ಬರೂ ಗ್ಯಾಸ್ ತುಂಬಿಸುವಲ್ಲಿ ನಿರತರಾಗಿದ್ದು, ಮಹದೇಶ್ ನೀರು ತರಲೆಂದು ಒಳಗೆ ಹೋಗಿದ್ದಾನೆ. ಈ ವೇಳೆ ಗ್ಯಾಸ್ ಸ್ಪೋಟಗೊಂಡು ದಿನೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!